alex Certify ನೀಟ್​ ಪರೀಕ್ಷೆಯಲ್ಲಿ 0 ಅಂಕ: ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀಟ್​ ಪರೀಕ್ಷೆಯಲ್ಲಿ 0 ಅಂಕ: ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ

Maharashtra Girl Scores 0 out of 720 in NEET Exams, Files Petition for Manual Evaluation

ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ 720ಕ್ಕೆ 0 ಅಂಕ ಬಂದ ಕಾರಣ ಮಹಾರಾಷ್ಟ್ರದ ವಿದ್ಯಾರ್ಥಿನಿಯೊಬ್ಬರು ಮುಂಬೈ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾಳೆ. ಕಡಿಮೆ ಅಂದರೂ 650 ಅಂಕ ಬರಬಹುದು ಎಂದುಕೊಂಡಿದ್ದ ವಿದ್ಯಾರ್ಥಿನಿ 0 ಅಂಕ ಪಡೆದ ಕಾರಣ ನನ್ನ ಉತ್ತರ ಪತ್ರಿಕೆಯನ್ನ ಮರುಮೌಲ್ಯಮಾಪನ ಮಾಡಬೇಕೆಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದಾಳೆ.

ಶುಕ್ರವಾರ ಪ್ರಕಟವಾದ ನೀಟ್​ ಫಲಿತಾಂಶದಲ್ಲಿ 720ಕ್ಕೆ 720 ಅಂಕ ಪಡೆಯುವ ಮೂಲಕ ಶೋಯೆಬ್​ ಅಫ್ತಬ್​ ಮೊದಲ ಅಂಕ ಪಡೆದಿದ್ರೆ 720 ಅಂಕ ಪಡೆದಿದ್ದ ಆಕಾಂಕ್ಷಾ ಸಿಂಗ್​ ವಯಸ್ಸಿನಲ್ಲಿ ಚಿಕ್ಕವರಾದ ಕಾರಣ 2ನೇ ಅಂಕಕ್ಕೆ ತೃಪ್ತಿ ಪಟ್ಟಿದ್ರು.
ಆದರೆ ಇದೀಗ ವಸುಂಧರಾ ಭೋಜನೆ ಎಂಬ ವಿದ್ಯಾರ್ಥಿನಿ ನನಗೆ 0 ಅಂಕ ಬಂತು ಎಂಬ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾಳೆ.

ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎ. ಎಸ್ ಚಂದ್ರಶೇಖರ್​ ಹಾಗೂ ಎನ್​ವಿ ಸೂರ್ಯವಂಶಿ ನೇತೃತ್ವದ ಪೀಠ ರಾಷ್ಟ್ರೀಯ ಪರೀಕ್ಷಾ ಮಂಡಳಿ ಹಾಗೂ ಕೇಂದ್ರ ಆರೋಗ್ಯ ಹಾಗೂ ಮಾನವ ಸಂಪನ್ಮೂಲ ಇಲಾಖೆಗೆ ನೋಟಿಸ್ ನೀಡಿದೆ. ನೀಟ್​ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರೋದಿಲ್ಲ. ಹೀಗಾಗಿ ವಿದ್ಯಾರ್ಥಿನಿ ಕೋರ್ಟ್ ಮೆಟ್ಟಿಲೇರಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...