ಅಹಮದ್ ನಗರ: ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಹಾಯದೊಂದಿಗೆ ಶಿವಸೇನೆ ಮತ್ತು ಎನ್ಸಿಪಿ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ರಚಿಸಿ ಅಧಿಕಾರಕ್ಕೆ ಬಂದಿದ್ದರೂ ಸ್ಥಳೀಯ ಮಟ್ಟದಲ್ಲಿ ಶಿವಸೇನೆ ಮತ್ತು ಎನ್ಸಿಪಿ ನಡುವೆ ಹೊಂದಾಣಿಕೆ ಆಗಿಲ್ಲ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಮ್ಮುಖದಲ್ಲಿ ಶಿವಸೇನೆಯ ಕಾರ್ಪೋರೇಟರ್ ಗಳು ಎನ್ಸಿಪಿಗೆ ಸೇರ್ಪಡೆಯಾಗಿದ್ದಾರೆ. ಅಹಮದ್ ನಗರ ಜಿಲ್ಲೆಯ ಪಾರ್ನರ್ ಮುನ್ಸಿಪಲ್ ಕಾರ್ಪೋರೇಷನ್ ಐವರು ಸದಸ್ಯರು ಶಿವಸೇನೆ ಪಕ್ಷವನ್ನು ತೊರೆದು ಎನ್ಸಿಪಿಗೆ ಸೇರ್ಪಡೆಯಾಗಿದ್ದಾರೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಮ್ಮುಖದಲ್ಲಿ 5 ಕಾರ್ಪೋರೇಟರ್ ಗಳು ಎನ್ಸಿಪಿಗೆ ಸೇರ್ಪಡೆಯಾಗಿದ್ದಾರೆ. ಸ್ಥಳೀಯ ಶಾಸಕ ನೀಲೇಶ್ ಲಂಕೆ ಅವರೊಂದಿಗೆ ಸಂಪರ್ಕದಲ್ಲಿದ್ದ ಕಾರ್ಪೋರೇಟರ್ ಗಳು ಶಿವಸೇನೆ ತೊರೆದಿದ್ದಾರೆ. ಪಾರ್ನರ್ ನಗರವನ್ನು ಶಿವಸೇನೆ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದು ಈ ಬೆಳವಣಿಗೆಯಿಂದ ಶಿವಸೇನೆಗೆ ತೀವ್ರ ಹಿನ್ನಡೆಯಾಗಿದೆ.