ಕೋವಿಡ್ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಹಗಲಿರುಳು ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಅಪ್ಪ-ಮಗ ಇಬ್ಬರೂ ಅದೇ ಸೋಂಕಿಗೆ ಬಲಿಯಾದ ದಾರುಣ ಘಟನೆ ನಡೆದಿದೆ.
ಕಲ್ಯಾಣ್ ಪ್ರದೇಶದ ವೈದ್ಯ ಡಾ. ನಾಗೇಂದ್ರ ಮಿಶ್ರಾ (58) ಮತ್ತು ಅವರ ಪುತ್ರ ಡಾ. ಸೂರಜ್ (28) ಒಂದು ಗಂಟೆ ವ್ಯತ್ಯಾಸದಲ್ಲಿ ಮೃತರಾದವರು. ನಾಗೇಂದ್ರ ಅವರ ಪತ್ನಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಜನಪ್ರಿಯ ಜಾಲತಾಣ ವಾಟ್ಸಾಪ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಸುರಕ್ಷಿತವಾಗಿಲ್ಲ ಬಳಕೆದಾರರ ಮಾಹಿತಿ
ವೈದ್ಯ ಅಪ್ಪ – ಮಗ ಇಬ್ಬರೂ ಕಳೆದ ಒಂದು ವರ್ಷದಿಂದ ದಣಿವಿಲ್ಲದೇ ಕೋವಿಡ್ ಸೋಂಕಿತರ ಆರೈಕೆಯಲ್ಲಿದ್ದರು.
ಇಬ್ಬರೂ ಸೋಂಕಿತರಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆ ಡಾ. ನಾಗೇಂದ್ರ ತಮ್ಮ ಹುಟ್ಟುಹಬ್ಬದ ದಿನದಂದೇ ಕೊನೆಯುಸಿರೆಳೆದರು.