alex Certify ರೂಪಾಂತರಿತ ಕೊರೊನಾ ವಿರುದ್ಧ ಹೊಸ ಲಸಿಕೆ ಪರಿಣಾಮಕಾರಿಯಲ್ಲ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೂಪಾಂತರಿತ ಕೊರೊನಾ ವಿರುದ್ಧ ಹೊಸ ಲಸಿಕೆ ಪರಿಣಾಮಕಾರಿಯಲ್ಲ…?

ಬ್ರಿಟನ್​​ನಲ್ಲಿ ಕಂಡುಬಂದಿರುವ ರೂಪಾಂತರಗೊಂಡ ಕೊರೊನಾ ವೈರಸ್​ ವಿರುದ್ಧ ಕೆಲವು ದೇಶಗಳು ಬಳಕೆ ಮಾಡುತ್ತಿರುವ ಕೊರೊನಾ ಲಸಿಕೆ ಶೇಕಡಾ 100ರಷ್ಟು ಪರಿಣಾಮಕಾರಿಯಾಗಿ ಇರೋದಿಲ್ಲ ಅಂತಾ ಮಹಾರಾಷ್ಟ್ರ ಕೋವಿಡ್​ 19 ಟಾಸ್ಕ್​ಫೋರ್ಸ್ ಮುಖ್ಯಸ್ಥ ಡಾ. ಸಂಜಯ್​ ಓಕ್​ ಹೇಳಿದ್ದಾರೆ.

ಸಾಮೂಹಿಕ ಸಭೆಗಳು ಕೊರೊನಾ ಸೂಪರ್ ​ಸ್ಪ್ರೆಡ್​ ಮಾಡುವ ಕೆಲಸ ಮಾಡುತ್ತೆ. ಹೀಗಾಗಿ ಜನರು ಮುಂದಿನ 1 ವರ್ಷಗಳ ಕಾಲ ಮಾಸ್ಕ್​ ಹಾಗೂ ಸಾಮಾಜಿಕ ಅಂತರ ಕಾಪಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.

ಬ್ರಿಟನ್​ನಲ್ಲಿ ಪತ್ತೆಯಾದ ರೂಪಾಂತರಿತ ಕೊರೊನಾ ವಿಚಾರವಾಗಿಯೂ ಮಾತನಾಡಿದ ಅವ್ರು…..ವೈರಸ್​ನ ಆರ್​ಎನ್​ಎದಲ್ಲಿ ಒಂದು ಸಣ್ಣ ಬದಲಾವಣೆಯಿಂದ ಈ ಹೊಸ ವೈರಸ್​ ಹುಟ್ಟಿಕೊಂಡಿದೆ ಅಂತಾ ಮಾಹಿತಿ ನೀಡಿದರು.

ಆದರೆ ರೂಪಾಂತರಿತ ಕೊರೊನಾ ಸ್ಟ್ರೈನ್​ನಲ್ಲಾದ ಈ ಸಣ್ಣ ಬದಲಾವಣೆ ಇತ್ತೀಚಿಗೆ ಅಭಿವೃದ್ಧಿಪಡಿಸಲಾದ ಲಸಿಕೆಯ ಪರಿಣಾಮಿಕಾರತ್ವವನ್ನ ಪ್ರಶ್ನೆ ಮಾಡುತ್ತಿದೆ ಎಂದು ಓಕ್​ ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...