ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬರುವಂತೆ ಕಾಣ್ತಿಲ್ಲ. ಕಳೆದ ವರ್ಷವೂ ಕೊರೊನಾದಿಂದ ಸರಿಯಾಗಿ ಹೊಡೆತ ತಿಂದಿದ್ದ ಮಹಾರಾಷ್ಟ್ರ ಈ ವರ್ಷವೂ ಕೊರೊನಾಗೆ ಅತಿ ಹೆಚ್ಚು ತುತ್ತಾದ ರಾಜ್ಯವಾಗಿದೆ.
ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆ ನಾಗ್ಪುರ ಜಿಲ್ಲೆಯಲ್ಲಿ ಮಾರ್ಚ್ 15ರಿಂದ 21ರವರೆಗೆ ಒಂದು ವಾರಗಳ ಕಾಲ ಮಹಾರಾಷ್ಟ್ರ ಸರ್ಕಾರ ಲಾಕ್ಡೌನ್ ವಿಧಿಸಿದೆ.
ಮಹಾರಾಷ್ಟ್ರದಲ್ಲಿ ಬುಧವಾರ 13,659 ಹೊಸ ಕೊರೊನಾ ಕೇಸ್ಗಳು ವರದಿಯಾದ ಬಳಿಕ ಶಿವಸೇನಾ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇದು ಈ ವರ್ಷದಲ್ಲಿ ಒಂದೇ ದಿನದಲ್ಲಿ ದಾಖಲಾದ ಅತಿ ಹೆಚ್ಚು ಕೊರೊನಾ ಸೋಂಕಿತರ ಸಂಖ್ಯೆ ಆಗಿದೆ.
ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 22,52,057 ಕೊರೊನಾ ಕೇಸ್ಗಳು ವರದಿಯಾಗಿದೆ. ಮುಂದಿನ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನ ನೋಡಿಕೊಂಡು ಲಾಕ್ಡೌನ್ ಮುಂದುವರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.