alex Certify ಕೋವಿಡ್-19 ಪರಿಹಾರ ನಿಧಿಗೆ 90,000 ರೂ. ದೇಣಿಗೆ ಕೊಟ್ಟ ಸನ್ಯಾಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19 ಪರಿಹಾರ ನಿಧಿಗೆ 90,000 ರೂ. ದೇಣಿಗೆ ಕೊಟ್ಟ ಸನ್ಯಾಸಿ

ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ತಮಿಳುನಾಡು ಸರ್ಕಾರದ ರಿಲೀಫ್ ಫಂಡ್‌ಗೆ ಮಧುರೈನ ವ್ಯಕ್ತಿಯೊಬ್ಬರು ಭಿಕ್ಷೆ ಎತ್ತಿ 90,000 ರೂ.ಗಳ ದೇಣಿಗೆ ನೀಡಿದ್ದಾರೆ. ಪೂಲ್‌ಪಾಂಡಿಯನ್ ಹೆಸರಿನ ಈ ವ್ಯಕ್ತಿ, ಕಳೆದ ಮೇ ತಿಂಗಳಿನಲ್ಲಿ 10,000 ರೂಗಳನ್ನು ದೇಣಿಗೆ ರೂಪದಲ್ಲಿ ಕೊಟ್ಟಿದ್ದರು.

“ನಾನು ಈ ದುಡ್ಡನ್ನು ಮಕ್ಕಳ ಶಿಕ್ಷಣಕ್ಕೆ ನೀಡಲು ಬಯಸಿದ್ದೆ. ಆದರೆ ಈಗ, ಕೊರೊನಾ ವೈರಸ್‌ ಸಮಸ್ಯೆ ದೊಡ್ಡದಾದ ಕಾರಣ ಪರಿಹಾರ ನಿಧಿಗೆ ಈ ದುಡ್ಡನ್ನು ಕೊಟ್ಟಿದ್ದೇನೆ. ನನಗೆ ಸಮಾಜ ಸೇವಕ ಎಂಬ ಹೆಸರನ್ನು ಜಿಲ್ಲಾ ಕಲೆಕ್ಟರ್‌ ಕೊಟ್ಟಿರುವುದು ಬಹಳ ಸಂತೋಷವಾಗಿದೆ” ಎಂದು ಪೂಲ್‌ಪಾಂಡಿಯನ್ ತಿಳಿಸಿದ್ದಾರೆ.

ಸದ್ಯ ತಮಿಳುನಾಡಿನಲ್ಲಿ 55,000ದಷ್ಟು ಸಕ್ರಿಯ ಕೊರೊನಾ ಕೇಸ್‌ಗಳಿದ್ದು, 2,83,937 ಮಂದಿ ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಅಧಿಕೃತ ಪ್ರಕಟಣೆಯಿಂದ ತಿಳಿದುಬಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...