ಮಧ್ಯ ಪ್ರದೇಶದ ಇಂದೋರ್ ಹೈಕೋರ್ಟ್ ಕ್ರಾಸಿಂಗ್ ಸಿಗ್ನಲ್ ಬಳಿ ತಮ್ಮ ಮೂನ್‌ವಾಕ್ ಸ್ಟೆಪ್‌ಗಳ ಮೂಲಕ ಫೇಮಸ್ ಆಗಿರುವ ಸಂಚಾರಿ ಪೊಲೀಸ್ ರಣಜೀತ್ ಸಿಂಗ್ ದೇಶವಾಸಿಗಳ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ.
42 ವರ್ಷ ವಯಸ್ಸಿನ ’ಸಿಂಗಮ್’ ಎಂದೇ ಕರೆಯಲ್ಪಡುವ ಇಂದೋರಿನ ಈ ಪೊಲೀಸಪ್ಪ ಇದೀಗ ತಮ್ಮ 6-7 ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು ಕೋವಿಡ್ ಸೋಂಕಿತರಿಗೆ ಪೌಷ್ಠಿಕ ಆಹಾರ ಒದಗಿಸುವಲ್ಲಿ ನಿರತರಾಗಿದ್ದಾರೆ. ಸೋಂಕಿನಿಂದಾಗಿ ಐಸೋಲೇಷನ್‌ನಲ್ಲಿರುವ ರೋಗಿಗಳಿಗೆ ಅವರ ಮನೆಬಾಗಿಲುಗಳಿಗೇ ಆಹಾರವನ್ನು ಡೆಲಿವರಿ ಮಾಡುತ್ತಿದ್ದಾರೆ ಸಿಂಗ್.
ನಾಲ್ಕರ ಪೋರನ ಕಾರ್ಟೂನ್ ಪ್ರೀತಿ ತಂದಿಟ್ತು ಫಜೀತಿ….!
ಇಂದೋರ್‌ನ ಆರು ಆಸ್ಪತ್ರೆಗಳಿಗೆ ತಮ್ಮ ಈ ಸೇವೆ ಸಲ್ಲಿಸುತ್ತಿರುವ ಸಿಂಗ್ ಅವರ ಜೊತೆಯಲ್ಲಿ ಬಾಲ್ ಮುಕುಂದ್, ರವಿ, ರಾಜೇಶ್, ಗಜೇಂದ್ರ, ತಾರಾ ಚಂದ್ ಹಾಗೂ ಸಂಚಾರಿ ಪೊಲೀಸ್‌ನ ಕ್ರೇನ್ ಚಾಲಕ ಮುನ್ನಾ ಅನ್ಸಾರಿ ಸಹ ಸೇರಿಕೊಂಡಿದ್ದಾರೆ. ಇವರೆಲ್ಲಾ ಸೇರಿ ಪ್ರತಿನಿತ್ಯ 250ಕ್ಕೂ ಹೆಚ್ಚು ಮಂದಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಕಳೆದ 24 ದಿನಗಳಿಂದ ತಮ್ಮ ಕರ್ತವ್ಯದ ವೇಳೆಗೆ ಮುನ್ನ ಹಾಗೂ ನಂತರದ ಅವಧಿಯಲ್ಲಿ ಈ ಸತ್ಕರ್ಮಿಗಳು ಜನಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ.