alex Certify ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನ 1.5 ಕೋಟಿ ರೂಪಾಯಿಗೆ ಮಾರಾಟಕ್ಕಿಟ್ಟ ಪತ್ನಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ರಮ ಸಂಬಂಧ ಹೊಂದಿದ್ದ ಪತಿಯನ್ನ 1.5 ಕೋಟಿ ರೂಪಾಯಿಗೆ ಮಾರಾಟಕ್ಕಿಟ್ಟ ಪತ್ನಿ..!

ಮೋಸ ಮಾಡಿದ ಪತಿಯನ್ನ ಪತ್ನಿಯೊಬ್ಬಳು 1.5 ಕೋಟಿ ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದ ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ.

ಬಾಲಕಿಯೊಬ್ಬಳು ತನ್ನ ತಂದೆ ತನ್ನ ಸಹೋದ್ಯೋಗಿಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಭೂಪಾಲ್​ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ದೂರಿನಲ್ಲಿ ಬಾಲಕಿ, ತಂದೆಯ ಅಕ್ರಮ ಸಂಬಂಧ ಹಾಗೂ ಈ ಕಾರಣಕ್ಕೆ ಮನೆಯಲ್ಲಿ ಆಗುತ್ತಿದ್ದ ಜಗಳಗಳ ಬಗ್ಗೆ ವಿವರಿಸಿದ್ದಾಳೆ. ಅಲ್ಲದೇ ಈ ಅಕ್ರಮ ಸಂಬಂಧದಿಂದ ನನ್ನ ಹಾಗೂ ನನ್ನ ಸಹೋದರಿಯ ವ್ಯಾಸಂಗಕ್ಕೂ ಅಡಚಣೆ ಉಂಟಾಗುತ್ತಿದೆ ಎಂದು ಆರೋಪಿಸಿದ್ದಳು.

ಈ ದೂರಿನ ನಂತರ ದಂಪತಿಯನ್ನ ಕೋರ್ಟ್​ ಕೌನ್ಸೆಲಿಂಗ್​ಗೆ ಒಳಪಡಿಸಿತು. ಈ ಕೌನ್ಸೆಲಿಂಗ್​​ ವೇಳೆ ಪತಿ ತನ್ನ ಹಿರಿಯ ಸಹೋದ್ಯೋಗಿ ಜೊತೆ ಅಕ್ರಮ ಸಂಬಂಧ ಹೊಂದಿರೋದ್ರ ಬಗ್ಗೆ ಒಪ್ಪಿಕೊಂಡಿದ್ದಾನೆ. ಅಲ್ಲದೇ ತನ್ನ ಹೆಂಡತಿಗೆ ವಿಚ್ಚೇಧನ ನೀಡಿ ಸಹೋದ್ಯೋಗಿ ಜೊತೆ ಹೊಸ ಜೀವನ ಆರಂಭಿಸೋದಾಗಿ ಹೇಳಿದ್ದಾನೆ. ಆದರೆ ಈತನ ಪತ್ನಿ ವಿಚ್ಚೇಧನ ನೀಡೋಕೆ ತಯಾರಿರಲಿಲ್ಲ. ಸಾಕಷ್ಟು ಸಂಧಾನ ಕಾರ್ಯಗಳ ಬಳಿಕ ದಂಪತಿ ಒಂದು ಅಗ್ರಿಮೆಂಟ್​ಗೆ ಒಪ್ಪಿಕೊಂಡಿದೆ.

ತನ್ನ ಪತಿ ಸಂಬಂಧ ಹೊಂದಿರುವ ಸಹೋದ್ಯೋಗಿ ತನಗೆ ಒಂದು ಅಪಾರ್ಟ್​ಮೆಂಟ್​ ಜೊತೆಗೆ 27 ಲಕ್ಷ ರೂಪಾಯಿ ನಗದನ್ನ ನೀಡಿದ್ರೆ ತಾನು ಪತಿಯನ್ನ ಬಿಟ್ಟುಕೊಡೋಕೆ ಸಿದ್ಧ ಎಂದು ಒಪ್ಪಿಕೊಂಡಿದ್ದಾಳೆ.

ಅಕ್ರಮ ಸಂಬಂಧ ಇಟ್ಟುಕ್ಕೊಂಡಿದ್ದ ಪತಿಯ ಜೊತೆ ಸಂಸಾರ ನಡೆಸೋಕೆ ಆಕೆಗೂ ಇಷ್ಟವಿರಲಿಲ್ಲ. ಹೀಗಾಗಿ ತನ್ನ ಹಾಗೂ ತನ್ನ ಇಬ್ಬರು ಹೆಣ್ಣು ಮಕ್ಕಳ ಭವಿಷ್ಯವನ್ನ ಭದ್ರಪಡಿಸಲಿಕ್ಕೋಸ್ಕರ ಆಕೆ ಈ ಕಂಡೀಷನ್​ನ್ನು ಪತಿಯ ಮುಂದೆ ಇಟ್ಟಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...