alex Certify ಮದುವೆಗೆ ಒಪ್ಪದ ಮಹಿಳಾ ಕಾನ್ಸ್ ಟೇಬಲ್ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಒಪ್ಪದ ಮಹಿಳಾ ಕಾನ್ಸ್ ಟೇಬಲ್ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ಹಲ್ಲೆ ನಡೆಸಿ ಪರಾರಿ

 ದಿಂಡೋರಿ: ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಮಹಿಳಾ ಕಾನ್ಸ್ ಟೇಬಲ್ ಗೆ ಮದುವೆಯಾಗುವಂತೆ ಬಲವಂತ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಒಪ್ಪದಿದ್ದಾಗ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಶುಕ್ರವಾರ ಘಟನೆ ನಡೆದಿದ್ದು ಶನಿವಾರ ದೂರು ದಾಖಲಾಗಿದೆ. ಶಹಾಪುರ್ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಇನ್ಸ್ ಪೆಕ್ಟರ್ ಹೇಮಂತ್ ಬಾರ್ವೆ ಹಲ್ಲೆ ನಡೆಸಿದ ಆರೋಪಿಯಾಗಿದ್ದಾರೆ.

ಮದುವೆಯಾಗುವಂತೆ ಮಹಿಳಾ ಕಾನ್ಸ್ ಟೇಬಲ್ ಗೆ ಒತ್ತಡ ಹೇರುತ್ತಿದ್ದ ಅವರು ಶುಕ್ರವಾರ ಸಂಜೆ ಪೋಲಿಸ್ ಲೈನ್ ಪ್ರದೇಶದ ಕಾನ್ಸ್ ಟೇಬಲ್ ಮನೆಗೆ ಬಲವಂತವಾಗಿ ಪ್ರವೇಶಿಸಿ ಮದುವೆಯಾಗಲು ಒತ್ತಡ ಹೇರಿದ್ದಾರೆ. ಈ ವೇಳೆ ಮಹಿಳಾ ಕಾನ್ ಸ್ಟೇಬಲ್ ಮದುವೆಗೆ ನಿರಾಕರಿಸಿದಾಗ ಥಳಿಸಿ ಪರಾರಿಯಾಗಿದ್ದಾರೆ ಎಂದು ಕೊಟ್ವಾಲಿ ಪೊಲೀಸ್ ಠಾಣೆ ಉಸ್ತುವಾರಿ ಸಿ.ಕೆ. ಸಿರಾಮೆ ಮಾಹಿತಿ ನೀಡಿದ್ದಾರೆ.

ಇನ್ಸ್ ಪೆಕ್ಟರ್ ಹೇಮಂತ್ ವಿರುದ್ಧ ವಿವಿಧ ಪ್ರಕರಣಗಳಡಿ ಕೇಸು ದಾಖಲಿಸಲಾಗಿದ್ದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಈ ಬಗ್ಗೆ ಮಾಹಿತಿ ಪಡೆದು, ಹೇಮಂತ್ ಅವರನ್ನು ಅಮಾನತು ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...