ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ದೇಣಿಗೆ ಸಂಗ್ರಹ ಮಾಡಲಾಗ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಮಧ್ಯಪ್ರದೇಶದ ಭೋಪಾಲ್ನ ವ್ಯಕ್ತಿಯೊಬ್ಬ ರಾಮ ಮಂದಿರದ ಹೆಸರಲ್ಲಿ ನಕಲಿ ಚೀಟಿಗಳನ್ನ ನೀಡಿ ದೇಣಿಗೆ ಸಂಗ್ರಹಿಸಿದ ತಪ್ಪಿಗೆ ಜೈಲು ಪಾಲಾಗಿದ್ದಾನೆ.
ಮನೀಶ್ ರಜ್ಪೂತ್ ಎಂಬಾತ ಅಂಗಡಿ ಮಾಲೀಕರಿಗೆ ನಕಲಿ ರಶೀದಿಗಳನ್ನ ನೀಡಿ ಹಣ ಸಂಗ್ರಹಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿ ರಾಜೇಶ್ ಭದೋರಿಯಾ ಹೇಳಿದ್ದಾರೆ.
ನಕಲಿ ಖಾತೆ ಮೂಲಕ ಸುಳ್ಳು ವದಂತಿ ಹಬ್ಬಿಸಿದವರು ಅರೆಸ್ಟ್
ರಾಜಪೂತ್ನ ಕಳ್ಳಾಟದ ಬಗ್ಗೆ ಮಾಹಿತಿ ಪಡೆದ ವಿಶ್ವ ಹಿಂದೂ ಪರಿಷತ್ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೂಕ್ತ ಮಾಹಿತಿ ಆಧರಿಸಿದ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶ್ವ ಹಿಂದೂ ಪರಿಷತ್ ಮುಖಂಡ ಯತೇಂದ್ರ ಪಾಲ್ ಸಿಂಗ್ ಈ ಪ್ರಕರಣದ ದೂರುದಾರರಾಗಿದ್ದಾರೆ.