ಮಧ್ಯಪ್ರದೇಶದ ಪನ್ನಾ ಗಣಿ ಪ್ರದೇಶದಲ್ಲಿ ಕಾರ್ಮಿಕನೊಬ್ಬನಿಗೆ ಲಕ್ಷಾಂತರ ಮೌಲ್ಯದ ವಜ್ರ ಸಿಕ್ಕಿದೆ.
ಈ ಕುರಿತು ಮಾಹಿತಿ ನೀಡಿರುವ ಪನ್ನಾ ವಜ್ರ ಗಣಿ ಪ್ರದೇಶಾಧಿಕಾರಿ ಆರ್.ಕೆ. ಪಾಂಡೆ, ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಕಾರ್ಮಿಕ ಸುಬಾಲ್ ಅವರಿಗೆ 7.5 ಕ್ಯಾರೆಟ್ ಗಾತ್ರದ ವಜ್ರ ಸಿಕ್ಕಿದೆ.
ಸದ್ಯಕ್ಕೆ ಅದನ್ನು ಜಿಲ್ಲಾ ವಜ್ರ ವಿಭಾಗದ ಕಚೇರಿಯಲ್ಲಿ ಇರಿಸಲಾಗಿದ್ದು, ಸರ್ಕಾರದ ನಿಯಮದಂತೆ ಹರಾಜು ಹಾಕಲಾಗುತ್ತದೆ. ಈ ಅಮೂಲ್ಯ ವಜ್ರದ ಕಲ್ಲಿಗೆ 30 ರಿಂದ 35 ಲಕ್ಷ ರೂ. ಬೆಲೆ ಆಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಹರಾಜು ಪ್ರಕ್ರಿಯೆ ಮುಗಿದ ಬಳಿಕ ಶೇ.12 ರಷ್ಟು ತೆರಿಗೆ ಕಡಿತಗೊಳಿಸಿ, ಉಳಿದ ಶೇ.88 ರಷ್ಟು ಹಣವನ್ನು ಕಾರ್ಮಿಕನಿಗೆ ಹಿಂದಿರುಗಿಸುವುದಾಗಿ ಪಾಂಡೆ ವಿವರಿಸಿದ್ದಾರೆ.