ಚಲಿಸುತ್ತಿದ್ದ ಬಸ್ನ ಕಿಟಕಿಯಿಂದ 13 ವರ್ಷದ ಬಾಲಕಿ ತಲೆ ಹೊರಹಾಕಿದ ಪರಿಣಾಮ ತಲೆಗೆ ಟ್ರಕ್ ಡಿಕ್ಕಿ ಹೊಡೆದು ಆಕೆ ಸಾವನ್ನಪ್ಪಿದ ದಾರುಣ ಘಟನೆ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ.
ಈ ವಿಚಾರವಾಗಿ ಮಾತನಾಡಿದ ಎಎಸ್ಪಿ ಸೀಮಾ ಆಲವಾ, ತಮನ್ನಾ ಎಂಬ ಬಾಲಕಿ ಖಾಂಡ್ವಾದಿಂದ ಇಂದೋರ್ಗೆ ಬಸ್ನಲ್ಲಿ ತನ್ನ ತಾಯಿ ಹಾಗೂ ಸಹೋದರಿಯ ಜೊತೆ ಪ್ರಯಾಣ ಬೆಳೆಸಿದ್ದಳು.
ಬಸ್ನಲ್ಲಿ ಚಾಲಕನ ಹಿಂಬದಿಯ ಸೀಟಿನಲ್ಲಿ ಈಕೆ ಕುಳಿತಿದ್ದಳು. ತಮನ್ನಾಗೆ ವಾಂತಿ ಬರುವಂತೆ ಭಾಸವಾದ್ದರಿಂದ ಆಕೆ ತಲೆಯನ್ನ ಹೊರಹಾಕಿದ್ದು ಈ ವೇಳೆ ಎದುರಿನಿಂದ ಬಂದ ಟ್ರಕ್ ಆಕೆಯ ತಲೆಗೆ ಡಿಕ್ಕಿ ಹೊಡೆದಿದೆ. ಇದರಿಂದ ಆಕೆಯ ತಲೆಯೇ ಕಟ್ ಆಗಿದೆ ಎಂದು ಹೇಳಿದ್ರು.