ಕೊರೋನಾ ಈಗ ಯಾರನ್ನೂ ಬಿಡುತ್ತಿಲ್ಲ. ಮಧ್ಯಪ್ರದೇಶದಲ್ಲಿ ಇಬ್ಬರು ನ್ಯಾಯಾಧೀಶರಿಗೆ ಕೊರೋನಾ ಕಾಣಿಸಿಕೊಂಡಿದೆ, ಈ ಕಾರಣಕ್ಕೆ ಅಲ್ಲಿನ ಖಂಡ್ವಾ ಜಿಲ್ಲೆ ಸೆಷನ್ಸ್ ನ್ಯಾಯಾಲಯವನ್ನು ಮುಚ್ಚಲಾಗಿದೆ.
ನ್ಯಾಯಾಧೀಶರಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯದ ಎಲ್ಲ 86 ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಮತ್ತು ಇಡಿ ನ್ಯಾಯಾಧೀಶರ ಕಾಲೋನಿಯನ್ನು ಕಂಟೈನ್ ಮೆಂಟ್ ಪ್ರದೇಶವಾಗಿ ಘೋಷಿಸಲಾಗಿದೆ.
ಆ ಇಬ್ಬರು ನ್ಯಾಯಾಧೀಶರು ವಲಸೆ ಕಾರ್ಮಿಕರಿಗೆ ಆಹಾರ ಪ್ಯಾಕೆಟ್ ಮತ್ತು ಇತರ ವಸ್ತುಗಳನ್ನು ವಿತರಿಸುವ ಕಾರ್ಯದಲ್ಲಿ ಭಾಗಿಯಾಗಿದ್ದರು. ಇದೀಗ ನ್ಯಾಯಾಧೀಶರು ಮತ್ತು ಅವರ ಪತ್ನಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಹೀಗಾಗಿ ಅಲ್ಲಿನ ಜಡ್ಜ್ ಕರ್ತವ್ಯಗಳನ್ನು ನೆರೆಯ ಬರ್ಹಾನ್ಪುರ್ ಜಿಲ್ಲೆ ಮತ್ತು ಸೆಷನ್ಸ್ ನ್ಯಾಯಾಧೀಶರು ನಿಭಾಯಿಸುವರು.