ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಶ್ರೀ ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರನ್ನೂ ಕಾಡುತ್ತಿದೆ. ಆಡಳಿತ ಪಕ್ಷ – ವಿರೋಧ ಪಕ್ಷ ಹೀಗೆ ರಾಜಕೀಯ ನಾಯಕರನ್ನೂ ಇದು ಬಿಟ್ಟಿಲ್ಲ.
ಈಗಾಗಲೇ ಸಾಕಷ್ಟು ಸಂಖ್ಯೆಯ ಜನಪ್ರತಿನಿಧಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಇದೀಗ ರಾಜ್ಯವೊಂದರ ಮುಖ್ಯಮಂತ್ರಿಗೂ ಈ ಸೋಂಕಿನ ಬಿಸಿ ತಟ್ಟಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರಿಗೆ ಕೊರೊನಾ ತಗುಲಿದ್ದು, 61 ವರ್ಷದ ಅವರನ್ನು ಭೂಪಾಲ್ ನ ಚಿರಾಯು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.