ಕೊರೊನಾ 2 ನೇ ಅಲೆ ಆರ್ಭಟ: 10 – 12 ನೇ ತರಗತಿ ಪರೀಕ್ಷೆ ಮುಂದೂಡಿದ ಮಧ್ಯ ಪ್ರದೇಶ ಸರ್ಕಾರ 14-04-2021 11:46AM IST / No Comments / Posted In: Latest News, India ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಸರ್ಕಾರ 10 ಹಾಗೂ 12ನೇ ತರಗತಿಯ ಅಂತಿಮ ಪರೀಕ್ಷೆಯ ದಿನಾಂಕವನ್ನ ಮುಂದೂಡಲು ನಿರ್ಧರಿಸಿದೆ. ರಾಜ್ಯದ ಶಿಕ್ಷಣ ಇಲಾಖೆ ಸಚಿವ ಇಂದರ್ ಸಿಂಗ್ ಪರ್ಮಾರ್ ಈ ವಿಚಾರವಾಗಿ ಮಾತನಾಡಿ ಏಪ್ರಿಲ್ 30ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನ ಮೇ 30ಕ್ಕೆ ಮುಂದೂಡಿದ್ದೇವೆ. ಪ್ರಾಕ್ಟಿಕಲ್ ಪರೀಕ್ಷೆ ಕೂಡ ಮೇ 15ರೊಳಗೆ ನಡೆಯಲಿದೆ ಅಂತಾ ಹೇಳಿದ್ರು. ಶಿಕ್ಷಣ ಇಲಾಖೆ ಇನ್ನೇನು ಕೆಲವೇ ದಿನಗಳಲ್ಲಿ 10 ಹಾಗೂ 12ನೇ ತರಗತಿ ಪರೀಕ್ಷೆಯ ವೇಳಾಪಟ್ಟಿಯನ್ನ ಬಿಡುಗಡೆ ಮಾಡಲಿದೆ ಎಂದು ಪರ್ಮಾರ್ ಹೇಳಿದ್ದಾರೆ. ಇನ್ನು ಪೂರ್ವಸಿದ್ಧತಾ ಪರೀಕ್ಷೆಗಳನ್ನ ವಿದ್ಯಾರ್ಥಿಗಳಿಗೆ ಮನೆಯಲ್ಲೇ ಕೂತು ಎದುರಿಸಲು ಹೇಳಲಾಗಿದೆ. ಬಳಿಕ ಈ ಉತ್ತರ ಪತ್ರಿಕೆಯನ್ನ ಶಾಲೆಗೆ ಸಲ್ಲಿಸಬೇಕು. ಶಾಲೆಯಿಂದ ಬಹಳವೇ ದೂರದಲ್ಲಿ ಇರುವ ವಿದ್ಯಾರ್ಥಿಗಳು ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲಿ ಉತ್ತರ ಪತ್ರಿಕೆಯನ್ನ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು ಇದರ ಜೊತೆಯಲ್ಲಿ 1 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯನ್ನೂ ಸರ್ಕಾರ ಘೋಷಣೆ ಮಾಡಿದೆ. ಸರ್ಕಾರದ ಆದೇಶದ ಪ್ರಕಾರ ಸರ್ಕಾರಿ ಶಾಲೆಗಳು ಜೂನ್ 13ರವರೆಗೂ ಬಂದ್ ಇರಲಿವೆ. ಖಾಸಗಿ ಶಾಲೆಗಳಿಗೆ ಏಪ್ರಿಲ್ 30ರ ವರೆಗೆ ತರಗತಿ ನಡೆಸದಂತೆ ಸೂಚನೆ ನೀಡಲಾಗಿದೆ.