
ವೃದ್ಧ ದಂಪತಿಯ ದುಃಸ್ಥಿತಿಯನ್ನ ವಿಡಿಯೋ ಮಾಡಿ ಅದನ್ನ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವ ಮೂಲಕ ಗೌರವ್ ವಾಸನ್ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಅವರ ವಿರುದ್ಧದ ಆರೋಪಗಳು ಸುಳ್ಳು ಎಂದು ಸಾಬೀತಾದರೆ ನಾವೆಲ್ಲ ಅವರನ್ನ ಇನ್ನಷ್ಟು ಶ್ಲಾಘಿಸೋಣ ಎಂದು ಟ್ವೀಟಾಯಿಸಿದ್ದಾರೆ.
ಬಾಬಾ ಕಾ ಡಾಬಾದ ದುಃಸ್ಥಿತಿಯನ್ನ ವಿಡಿಯೋ ಮಾಡಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಕಾಂತಾ ಪ್ರಸಾದ್ ಹಾಗೂ ಬಾದಾಮಿ ದೇವಿ ದಂಪತಿಗೆ ಗೌರವ್ ಪ್ರಚಾರವನ್ನ ತಂದುಕೊಟ್ಟಿದ್ದರು.
ಇದಾದ ಬಳಿಕ ಕಾಂತಾ ಪ್ರಸಾದ್ ಡಾಬಾಗೆ ಜನಸಮೂಹವೇ ಹರಿದು ಬಂದಿತ್ತು. ಆದರೆ ಈಗ ಕಾಂತಾ ಪ್ರಸಾದ್, ಗೌರವ್ ನಮ್ಮ ಹೆಸರನ್ನು ಬಳಕೆ ಮಾಡಿಕೊಂಡು ಬಂದ ದೇಣಿಗೆ ಹಣವನ್ನ ದುರುಪಯೋಗ ಮಾಡಿಕೊಳ್ತಿದ್ದಾರೆ ಅಂತಾ ದೂರು ದಾಖಲಿಸಿದ್ದಾರೆ.