ನಮ್ಮ ಬಗ್ಗೆ ನಮಗಿಂತಲೂ ಹೆಚ್ಚು ತಿಳಿದಿರುವವರು ಎಂದರೆ ನಮ್ಮ ಅಮ್ಮಂದಿರು. ಸದಾ ನಮ್ಮ ಅಗತ್ಯತೆಗಳ ಬಗ್ಗೆ ನಮಗಿಂತ ಹೆಚ್ಚಿನ ಅರಿವು ಹೊಂಧಿರುವ ತಾಯಂದಿರು, ಅವೆಲ್ಲಾ ಪೂರೈಕೆಯಾಗುತ್ತವೆ ಎಂಬುದನ್ನು ಖಾತ್ರಿ ಪಡಿಸಲು ಯಾವಾಗಲೂ ಒಂದು ಹೆಜ್ಜೆ ಹೆಚ್ಚೇ ಇಡುತ್ತಾರೆ.
ಇಂಥದ್ದೇ ಘಟನೆಯೊಂದರ ಬಗ್ಗೆ ಸಾಮಾಜಿಕ ಜಾತಲಾಣದಲ್ಲಿ ಶೇರ್ ಮಾಡಿಕೊಂಡಿರುವ ನೆಟ್ಟಿಗರೊಬ್ಬರು, ಕೋವಿಡ್-19 ಲಸಿಕೆಗೆ ತೆಗೆದುಕೊಳ್ಳಲು ಅನುಮತಿ ಕೊಡುವಂತೆ ಹೇಗೆ ತನ್ನ ತಾಯಿ ತನ್ನ ಬಾಸ್‌ಗೆ ಕರೆ ಮಾಡಿದ್ದರು ಎಂಬ ವಿಚಾರ ಹಂಚಿಕೊಂಡಿದ್ದಾರೆ.
“ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಅನುಮತಿ ಕೋರಿ ನಮ್ಮಮ್ಮ ನಮ್ಮ ಬಾಸ್‌ಗೆ ಈಗ ತಾನೇ ಕರೆ ಮಾಡಿದ್ದರು. ಎಂಥ ಹೆಂಗಸು ಈಕೆ! ಶಾಲಾ ದಿನಗಳು ನೆನಪಾದಂತೆ ಆಗಿದೆ” ಎಂದು ತಮ್ಮ ಈ ಅನುಭವವನ್ನು ಹೇಳಿಕೊಂಡಿದ್ದಾರೆ ಐಶ್ ಹೆಸರಿನ ಈಕೆ.
ಫೆಬ್ರವರಿ ಮೊದಲ ವಾರದಿಂದಲೇ ಲಸಿಕೆ ನೀಡಲು ಎಲ್ಲಾ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ
ಈ ಟ್ವೀಟ್ ಬಲೇ ಬೇಗ ವೈರಲ್ ಆಗಿದ್ದು, ಬಹಳಷ್ಟು ನೆಟ್ಟಿಗರು ತಮ್ಮ ಜೀವನದಲ್ಲೂ ನಡೆದ ಇಂಥದ್ದೇ ಘಟನೆಗಳ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.