ಹೈದರಾಬಾದ್ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ಜೋಡಣೆ ಮಾಡಲೆಂದು ಪುಣೆಯಿಂದ ಮೆದುಳು ಸತ್ತ ವ್ಯಕ್ತಿಯೊಬ್ಬರ ಶ್ವಾಸಕೋಶ ಜೋಡಣೆ ಮಾಡುವ ಕೆಲಸ ಯಶಸ್ವಿಯಾಗಿದೆ.
560 ಕಿಮೀ ವೈಮಾನಿಕ ಅಂತರದಷ್ಟೇ ದೂರದಲ್ಲಿರುವ ನಗರಗಳ ನಡುವೆ ಅಂಗಾಂಗಳ ವರ್ಗಾವಣೆಯನ್ನು ಒಂದು ಗಂಟೆಯ ಒಳಗೆ ಮಾಡಿ ಮುಗಿಸಲಾಗಿದೆ.
ಉಭಯ ನಗರಗಳ ವಿವಿಧ ಇಲಾಖೆಗಳು ಶ್ವಾಸಕೋಶದ ಸುಗಮ ಚಾಲನೆಗಾಗಿ ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಮಾಡಲು ಸಾಕಷ್ಟು ಪ್ರಯತ್ನ ಮಾಡಿವೆ.
ಹೈದರಾಬಾದ್‌ನ KIMS ಶ್ವಾಸಕೋಶ ಹಾಗೂ ಹೃದಯ ಕಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ತೆಲಂಗಾಣ ಸರ್ಕಾರದ ಜೀವನದಾನ ಯೋಜನೆಯಡಿ, ಡಾ. ಸ್ವರ್ಣಲತಾ ಅವರ ನೇತೃತ್ವದಲ್ಲಿ ಈ ಕಾರ್ಯವನ್ನು ಪೂರೈಸಲಾಗಿದೆ.
ಪುಣೆಯಿಂದ ಹೈದರಾಬಾದ್‌ಗೆ ಚಾರ್ಟರ್ಡ್ ವಿಮಾನವೊಂದರ ಮೂಲಕ ಶ್ವಾಸಕೋಶವನ್ನು ಸಾಗಾಟ ಮಾಡಲಾಗಿದ್ದು, ಎರಡೂ ನಗರಗಳ ಸಂಚಾರಿ ಪೊಲೀಸರು ಗ್ರೀನ್ ಕಾರಿಡಾರ್ ಸೃಷ್ಟಿ ಮಾಡಿಕೊಡುವ ಮೂಲಕ ತ್ವರಿತ ರವಾನೆಗೆ ನೆರವಾಗಿದ್ದಾರೆ.