alex Certify ಲಕ್ನೋ ವಿ.ವಿ.ಯಲ್ಲಿ ʼಗರ್ಭ ಸಂಸ್ಕಾರʼ ಡಿಪ್ಲೋಮಾ ಕೋರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ನೋ ವಿ.ವಿ.ಯಲ್ಲಿ ʼಗರ್ಭ ಸಂಸ್ಕಾರʼ ಡಿಪ್ಲೋಮಾ ಕೋರ್ಸ್

ಲಕ್ನೋ ವಿಶ್ವವಿದ್ಯಾಲಯವು ಗರ್ಭ ಸಂಸ್ಕಾರ ಎಂಬ ಹೊಸ ಡಿಪ್ಲೋಮಾ ಕೋರ್ಸ್​ ಒಂದನ್ನ ಆರಂಭಿಸಿದೆ. ಈ ಕೋರ್ಸ್​ನಲ್ಲಿ ಗರ್ಭಿಣಿಯರ ಆಹಾರ, ಉಡುಪು, ವರ್ತನೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಮಾಹಿತಿ ನೀಡಲಾಗುತ್ತೆ.

ಗರ್ಭ ಸಂಸ್ಕಾರದ ಮೊದಲ ತರಗತಿಯನ್ನ ಸೋಮವಾರ ಔಪಚಾರಿಕವಾಗಿ ನಡೆಸಲಾಯ್ತು. ಕ್ವೀನ್​ ಮೇರಿ ಆಸ್ಪತ್ರೆಯ ಡಾ. ಅಮಿತಾ ಪಾಂಡೆ ಹಾಗೂ ಆಧ್ಯಾತ್ಮಿಕ ಸಲಹೆಗಾರ್ತಿ ಶಿವಾನಿ ಮಿಶ್ರಾ ಪ್ರಸ್ತುತ ಸಂದರ್ಭದಲ್ಲಿ ಗರ್ಭ ಸಂಸ್ಕಾರದ ಮಹತ್ವ ಹಾಗೂ ಅಗತ್ಯತೆಯ ಕುರಿತು ಉಪನ್ಯಾಸ ನೀಡಿದ್ರು.

ಕೋರ್ಸ್​ನ ಸಂಯೋಜಕರಾದ ಡಾ. ಅರ್ಚನಾ ಶುಕ್ಲಾ ಈ ವಿಚಾರವಾಗಿ ಮಾತನಾಡಿ, ವೈದಿಕ ಗ್ರಂಥಗಳ ಪ್ರಕಾರ ಮಾನವ ಜೀವನದ ಭಾಗವಾಗಿರುವ 16 ಸಂಸ್ಕಾರಗಳಲ್ಲಿ ಮೊದಲನೆಯದು ಗರ್ಭ ಸಂಸ್ಕಾರ. ಈ ಕಾರ್ಯಕ್ರಮಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ, ಇದರಲ್ಲಿ ವಿದ್ಯಾರ್ಥಿಗಳು 16 ಮೌಲ್ಯಗಳ ಬಗ್ಗೆ ಕಲಿಯುತ್ತಾರೆ. ಕಾರ್ಯಕ್ರಮವು ಮುಖ್ಯವಾಗಿ ಕುಟುಂಬ ಯೋಜನೆ ಮತ್ತು ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಪೋಷಣೆಯ ಮೌಲ್ಯವನ್ನು ಒತ್ತಿಹೇಳುತ್ತದೆ. ಈ ಹೊಸ ಕೋರ್ಸ್ ಅಡಿಯಲ್ಲಿ ವಿವಿಧ ಕಾರ್ಯಾಗಾರಗಳನ್ನು ಆಯೋಜಿಸಲಾಗುವುದು ಎಂದು ಹೇಳಿದ್ರು.

ಮೂಲಗಳ ಪ್ರಕಾರ, ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು, ಗೃಹಿಣಿಯರು, ಐವಿಎಫ್ ಕೇಂದ್ರ ಸಂಯೋಜಕರು ಮತ್ತು ನಿವೃತ್ತ ಆರೋಗ್ಯ ಅಧಿಕಾರಿಗಳು ಕೂಡ ಡಿಪ್ಲೊಮಾ ಕೋರ್ಸ್‌ಗೆ ಸೇರ್ಪಡೆಯಾಗಿದ್ದಾರೆ. ಕೋರ್ಸ್​ ಜೊತೆಗೆ ಉದ್ಯೋಗವನ್ನೂ ಸೃಷ್ಟಿ ಮಾಡಬೇಕೆಂಬ ಆಶಯವನ್ನ ವಿಶ್ವ ವಿದ್ಯಾನಿಲಯ ಹೊಂದಿದೆ. ಅಲ್ಲದೇ ಗರ್ಭ ಸಂಸ್ಕಾರ ಎಂಬ ಡಿಪ್ಲೋಮಾ ಕೋರ್ಸ್ ಆರಂಭಿಸಿದ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೂ ಪಾತ್ರವಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...