ಗುಜರಿ ಅಂಗಡಿಗಳು ಅಂದರೆ ಎಲ್ಲಾ ಊರಲ್ಲೂ ಇರೋ ಒಂದು ಸಾಮಾನ್ಯ ಅಂಗಡಿ. ಆದರೆ ಲಕ್ನೌನ ಫೈಜುಲ್ಲಾಗಂಜ್ನ ಅಲ್ಲುನಗರದಲ್ಲಿರುವ ಗುಜರಿ ಅಂಗಡಿಯೊಂದು ವಿಶೇಷ ಕಾರಣದಿಂದ ಸುದ್ದಿ ಮಾಡ್ತಿದೆ.
29 ವರ್ಷದ ಸಿವಿಲ್ ಇಂಜಿನಿಯರ್ ಓಂ ಪ್ರಕಾಶ್ ಪ್ರಜಾಪತಿ ಎಂಬವರು ಕಬಡಿವಾಲಾ.ಕಾಮ್ ಎಂಬ ಗುಜರಿ ಅಂಗಡಿಯನ್ನ ನಡೆಸುತ್ತಿದ್ದಾರೆ. ತಿಂಗಳಿಗೆ 30 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದ ಸಿವಿಲ್ ಇಂಜಿನಿಯರ್ ಓಂ ಪ್ರಕಾಶ್ ತಮ್ಮ ಕೆಲಸಕ್ಕೆ ರಾಜೀನಾಮೇ ನೀಡಿ ಲಾಕ್ಡೌನ್ ಸಮಯದಲ್ಲಿ ಈ ಗುಜರಿ ಅಂಗಡಿಯನ್ನ ಆರಂಭಿಸಿದ್ರು.
ಈ ಗುಜರಿ ಅಂಗಡಿಯ ವಿಶೇಷತೆ ಅಂದರೆ ಇದರಲ್ಲಿ ಗ್ರಾಹಕರು ಸ್ಮಾರ್ಟ್ ಫೋನ್ ಮೂಲಕವೇ ಆನ್ಲೈನ್ನಲ್ಲಿ ತಮ್ಮ ಗುಜರಿ ವಸ್ತುಗಳನ್ನ ಯೋಗ್ಯ ಬೆಲೆಗೆ ಮಾರಾಟ ಮಾಡಬಹುದಾಗಿದೆ.
ನನ್ನ ಈ ಗುಜರಿ ಅಂಗಡಿ ಐಡಿಯಾ ಇಷ್ಟೊಳ್ಳೆಯ ಪ್ರತಿಕ್ರಿಯೆಯನ್ನ ಸಂಪಾದಿಸುತ್ತೆ ಎಂದು ನಾನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಈ ನನ್ನ ಸ್ಮಾರ್ಟ್ ಗುಜರಿ ಅಂಗಡಿ ಐಡಿಯಾ ಸಾಕಷ್ಟು ಮೆಚ್ಚುಗೆಯನ್ನ ಪಡೆಯುತ್ತಿದೆ ಎಂದು ಪ್ರಜಾಪತಿ ಸಂತಸ ವ್ಯಕ್ತಪಡಿಸಿದ್ರು.