ನವದೆಹಲಿ: ಉಜ್ವಲ ಯೋಜನೆಯಡಿ ಬಡ ಮಹಿಳೆಯರಿಗೆ ಮೂರು ತಿಂಗಳು ಉಚಿತವಾಗಿ ಸಿಲಿಂಡರ್ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರ ಸೆಪ್ಟೆಂಬರ್ ವರೆಗೆ ಸಿಲಿಂಡರ್ ಬಳಸಿಕೊಳ್ಳಲು ಅವಕಾಶ ನೀಡಿದೆ.
ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಕಾರಣ ಮೂರು ಸಿಲಿಂಡರ್ ಉಚಿತವಾಗಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಬಡವರು ತಿಂಗಳಿಗೆ ಒಂದು ಅಡುಗೆ ಸಿಲಿಂಡರ್ ಬಳಸದ ಕಾರಣ ಹಲವರ ಉಚಿತ ಸಿಲಿಂಡರ್ ಗಳು ಬಾಕಿ ಉಳಿದಿದ್ದು ಸೆಪ್ಟಂಬರ್ ವರೆಗೂ ಸಿಲಿಂಡರ್ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳು 14.2 ಕೆಜಿ ಮೂರು ಎಲ್ಪಿಜಿ ಸಿಲಿಂಡರ್ ಗಳನ್ನು ಉಚಿತವಾಗಿ ಪಡೆಯಬಹುದು ಎಂದು ಹೇಳಲಾಗಿದೆ.