ದೇಶದಲ್ಲಿ ಮೊದಲನೆ ಹಂತದ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮ ಮುಗಿದು ಎರಡನೇ ಹಂತದ ಡ್ರೈವ್ ನಡೆಯುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗಷ್ಟೇ ಲಸಿಕೆ ನೀಡಿದ್ದ ಕೇಂದ್ರ ಸರ್ಕಾರ ಎರಡನೇ ಹಂತದಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ನೀಡಿದೆ.
ಆದರೆ ಕೊರೊನಾ ವ್ಯಾಕ್ಸಿನೇಷನ್ ಡ್ರೈವ್ನಲ್ಲಿ ಮೇಘಾಲಯ ಕಳಪೆ ಸಾಧನೆ ಮಾಡಿದೆ. ಮೇಘಾಲಯದಲ್ಲಿನ 33,185 ಆರೋಗ್ಯ ಕಾರ್ಯಕರ್ತರಲ್ಲಿ ಕೇವಲ 23 ಪ್ರತಿಶತದಷ್ಟು ಮಂದಿ ಮಾತ್ರ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ. ಲಸಿಕೆ ತೆಗೆದುಕೊಳ್ಳಲು ಇರುವ ಹಿಂಜರಿತೆಯೇ ಈ ಕಳಪೆ ಸಾಧನೆಗೆ ಮುಖ್ಯ ಕಾರಣವಾಗಿದೆ.
ರಾಜ್ಯದಲ್ಲಿರುವ 33,185 ಮಂದಿ ಆರೋಗ್ಯ ಕಾರ್ಯಕರ್ತರದಲ್ಲಿ ಕೇವಲ 7600 ಮಂದಿ ಆರೋಗ್ಯ ಕಾರ್ಯಕರ್ತರು ಮಾತ್ರ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸೇವೆಗಳ ನಿರ್ದೇಶಕ ಡಾ. ಅಮನ್ ವಾರ್ ಮಾಹಿತಿ ನೀಡಿದ್ರು.
ಲಸಿಕೆಯ ಪರಿಣಾಮಕಾರತ್ವದ ಬಗ್ಗೆ ಇರುವ ವದಂತಿಗಳಿಗೆ ಬೆಲೆ ಕೊಟ್ಟು ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯುವ ಗೋಜಿಗೇ ಹೋಗಿಲ್ಲ ಎನ್ನಲಾಗಿದೆ.