ಕೊರೊನಾ ಮಹಿಳೆಯರಿಗಿಂತ ಪುರುಷರನ್ನು ಹೆಚ್ಚು ಬಾಧಿಸುತ್ತಿದೆಯೇ..? ಹೌದು ಎನ್ನುತ್ತವೆ ಇತ್ತೀಚಿನ ಸಂಶೋಧನೆಗಳು. ಕೋವಿಡ್ ನಲ್ಲಿ ಪುರುಷರ ಸಾವಿನ ಪ್ರಮಾಣವೂ ಹೆಚ್ಚಿದೆ ಎಂಬ ಮಾಹಿತಿಯನ್ನು ಸಂಶೋಧಕರು ನೀಡಿದ್ದಾರೆ.
ಇ.ಎಸ್.ಸಿ.ಎಂ.ಐ.ಡಿ. ಸೆಪ್ಟೆಂಬರ್ ಕಾನ್ಫರೆನ್ಸ್ ನಲ್ಲಿ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಕೋವಿಡ್ ಗೆ ತುತ್ತಾಗುವ ಪ್ರಮಾಣ ಮಹಿಳೆಯರಿಗಿಂತ ಪುರುಷರಲ್ಲಿ ಶೇ.62 ರಷ್ಟು ಹೆಚ್ಚಿದೆ. ಅಲ್ಲದೇ ಸಾವಿನ ಪ್ರಮಾಣವೂ ಹೆಚ್ಚಿದೆ ಎಂದು ವರದಿ ಹೇಳಿದೆ. ಈ ಹಿಂದೆ ಬಿಡುಗಡೆಯಾದ ಅಧ್ಯಯನ ವರದಿಯಲ್ಲಿ ಪುರುಷರು ಹಾಗೂ ಮಹಿಳೆಯರು ಸಮಾನವಾಗಿ ಈ ರೋಗಕ್ಕೆ ತುತ್ತಾಗುತ್ತಾರೆ ಎಂದು ತಿಳಿಸಲಾಗಿತ್ತು.
ಮಾನವನ ರೋಗ ನಿರೋಧಕ ಶಕ್ತಿಗೆ ಸಂಬಂಧಿಸಿದ ಟೆಸ್ಟೊಸ್ಟೆರಾನ್ ಮಹಿಳೆಯರಿಗಿಂತ ಪುರುಷರಲ್ಲಿ ಕಡಿಮೆ ಇರುತ್ತದೆ. ಅವರು ಜಾಸ್ತಿ ಹೊರಗೆ ಓಡಾಡುವುದು, ಹೊರಗಿನ ತಿಂಡಿ ತಿನ್ನುವುದು ಧೂಮಪಾನದಂಥ ಕೆಟ್ಟ ಹವ್ಯಾಸಗಳನ್ನು ಮಹಿಳೆಯರಿಗಿಂತ ಹೆಚ್ಚು ಹೊಂದಿರುವುದು ಇದಕ್ಕೆಕಾರಣ.
ಮಹಿಳೆಯರಿಗಿಂತ ಹೆಚ್ಚು ಪುರುಷರು ಹೃದಯಾಘಾತ, ಬಿಪಿ ಹಾಗೂ ಲಿವರ್ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಎಂದು 2016 ರ ಒಂದು ಸಂಶೋಧನೆಯೂ ಹೇಳಿದೆ. ಕೊರೊನಾ ವಿಷಯದಲ್ಲೂ ಇದು ಸತ್ಯ. ಇದರಿಂದಲೇ ಪುರುಷರ ಸಾವಿನ ಸಂಖ್ಯೆಯೂ ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ.