ಚೆನ್ನೈ: ಪ್ರೇಮಿಗಳು ಏಕಾಂತದಲ್ಲಿದ್ದ ದೃಶ್ಯವನ್ನು ನೋಡಿದ 8 ವರ್ಷದ ಬಾಲಕ ಬೇರೆಯವರಿಗೆ ವಿಷಯ ತಿಳಿಸುತ್ತಾನೆ ಎಂಬ ಭಯದಲ್ಲಿ ಆತನನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ನಡೆದಿದೆ.
17 ವರ್ಷದ ಅಪ್ರಾಪ್ತೆ ಮತ್ತು 21 ವರ್ಷದ ಪ್ರಿಯಕರ ಅಜಿತ್ ಕುಮಾರ್ ಸೇರಿ ಬಾಲಕನನ್ನು ಕೊಲೆ ಮಾಡಿದ್ದು ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಂಗರಾಜ್ ಮತ್ತು ಸುಮತಿ ದಂಪತಿಯ ಪುತ್ರನಾಗಿರುವ ಬಾಲಕ ಆಟವಾಡಲು ಮನೆಯಿಂದ ಹೊರಗೆ ಹೋದವ ನಾಪತ್ತೆಯಾಗಿದ್ದ. ಕೆಲಸಕ್ಕೆ ಹೋಗಿದ್ದ ಪೋಷಕರು ಸಂಜೆ ಮನೆಗೆ ಬಂದು ಹುಡುಕಾಟ ನಡೆಸಿದ್ದು ಬಾಲಕ ಕಾಣದಿದ್ದಾಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಂದರ್ಭದಲ್ಲಿ ಬಾಲಕನ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಅಜಿತ್ ಕುಮಾರ್ ಯುವತಿಯೊಬ್ಬಳನ್ನು ಪ್ರೀತಿಸಿದ್ದು ಆಕೆಗೆ ಗೊತ್ತಾಗದಂತೆ ಅಪ್ರಾಪ್ತೆಯೊಂದಿಗೆ ಸಂಬಂಧ ಬೆಳೆಸಿದ್ದಾನೆ.
ಇಬ್ಬರು ಏಕಾಂತದಲ್ಲಿದ್ದ ಸಂದರ್ಭದಲ್ಲಿ ಆಟವಾಡುತ್ತ ಅಲ್ಲಿಗೆ ಹೋದ ಬಾಲಕ ಇಬ್ಬರನ್ನು ನೋಡಿದ್ದಾನೆ. ಆತನನ್ನು ಸಮೀಪದಲ್ಲೇ ಇದ್ದ ಸ್ಮಶಾನಕ್ಕೆ ಕರೆದೊಯ್ದ ಅಜಿತ್ ಕುಮಾರ್ ಮತ್ತು ಅಪ್ರಾಪ್ತೆ, ಅಜಿತ್ ಪ್ರಿಯತಮೆಗೆ ವಿಷಯ ತಿಳಿಸದಂತೆ ಹೇಳಿದ್ದಾರೆ. ಆದರೆ, ಬಾಲಕ ಕೇಳದಿದ್ದಾಗ ಬಾಟಲಿಯಿಂದ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.