ಈ ಪ್ರೀತಿ ಎಂಬುದು ಅನಿರೀಕ್ಷಿತ ಘಳಿಕೆಯಲ್ಲಿ ಅನಿರೀಕ್ಷಿತ ಸ್ಥಳದಲ್ಲೇ ಆಗಿಬಿಡುತ್ತದೆ. ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಇದೀಗ ಜನರು ಜೀವನ ಸಂಗಾತಿಗಳನ್ನು ಆನ್ಲೈನ್‌ನಲ್ಲೇ ಹುಡುಕಲು ಶುರುವಿಟ್ಟುಕೊಂಡಿದ್ದಾರೆ.
ಕೆಲವರು ಇಂಥ ಕೆಲಸಕ್ಕೆ ಡೇಟಿಂಗ್ ಕಿರುತಂತ್ರಾಂಶಗಳನ್ನು ಹುಡುಕಿಕೊಂಡರೆ, ಇನ್ನೂ ಕೆಲವರು ಟ್ವಿಟರ್, ಫೇಸ್ಬುಕ್‌ನಂಥ ಪ್ಲಾಟ್‌ಫಾರಂಗಳ ಮೊರೆ ಹೋಗುತ್ತಾರೆ. ಇತ್ತೀಚಿಗೆ ‘We Met on Twitter’ ಹ್ಯಾಶ್‌ಟ್ಯಾಗ್ ಟ್ವಿಟರ್ ಟ್ರೆಂಡ್ ವೈರಲ್ ಆಗಿದೆ. ಈ ಟ್ಯಾಗ್ ಅಡಿ ಬಹಳಷ್ಟು ಜೋಡಿಗಳು ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ತಮ್ಮ ಮೊದಲ ಭೇಟಿ ಹೇಗೆ ಆಯಿತೆಂಬ ವಿಚಾರದಿಂದ ಹಿಡಿದು, ಈಗ ಅವರೆಲ್ಲಿದ್ದಾರೆ ಎನ್ನುವವರೆಗೂ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಟ್ವಿಟರ್‌ನಲ್ಲೇ ಇಷ್ಟೊಂದು ಹ್ಯಾಪಿ ಎಂಡಿಂಗ್ ಸ್ಟೋರಿಗಳು ಹುಟ್ಟಿಕೊಳ್ಳುವುದನ್ನು ಡೇಟಿಂಗ್ ಅಪ್ಲಿಕೇಶನ್‌ಗಳು ಹೇಗೆ ನೋಡಬಹುದು ಎಂಬ ಕುತೂಹಲವನ್ನು ಕೆಲವು ಮಂದಿ ಇದೇ ವೇಳೆ ವ್ಯಕ್ತಪಡಿಸಿದ್ದಾರೆ.
ಕೆಲವೊಂದು ಸಿಂಗಲ್‌ಗಳು, ಈ ಟ್ರೆಂಡ್ ಮೇಲೆ ಸಾಕಷ್ಟು ಜೋಕ್ ಗಳನ್ನು ಮಾಡಿಕೊಂಡು ಮೀಮ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.