ಪೂರ್ವ ಗಾಲ್ವನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.
ಇದನ್ನು ವಿವಿಧ ದೇಶದ ಪತ್ರಿಕೆಗಳು ಬೇರೆಬೇರೆಯಾಗಿ ವಿಶ್ಲೇಷಿಸಿವೆ. ಥೈವಾನ್ ಮಾಧ್ಯಮವೊಂದು ಇಲ್ ಸ್ಟ್ರ್ಯೂಷನ್ ಮೂಲಕ ಈ ಘಟನೆಯನ್ನು ವಿಶೇಷವಾಗಿ ಚಿತ್ರಿಸಿರುವುದು ವೈರಲ್ ಆಗಿದೆ. ಹಿಂದೂ ದೇವರಾದ ಶ್ರೀರಾಮನು ಚೀನಾದ ಡ್ರಾಗನ್ ಕೊಲ್ಲಲು ಹೊರಟಿರುವಂತೆ ಬಿಂಬಿಸುವ ಚಿತ್ರ ಬಳಸಿ ಮುಖಪುಟದಲ್ಲಿ ಪ್ರಕಟಿಸಿದೆ.
ನಾವು ಗೆಲ್ಲುತ್ತೇವೆ ನಾವು ಕೊಲ್ಲುತ್ತವೆ ಎಂಬ ಶೀರ್ಷಿಕೆಯೊಂದಿಗೆ ಶ್ರೀರಾಮನು ಬಿಲ್ಲನ್ನು ಎಳೆದು ಡ್ರಾಗನ್ ಕಡೆ ಬಾಣ ಬಿಡುವ ಚಿತ್ರ ಅದಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಈ ಚಿತ್ರವನ್ನು ಶೇರ್ ಮಾಡಿರುವ ಜನರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲೂ ಭಾರತೀಯ ನೆಟ್ಟಿಗರು ಅತಿಹೆಚ್ಚಿನ ಸಂಖ್ಯೆಯಲ್ಲಿ ಪೋಸ್ಟನ್ನು ಪ್ರಕಟಿಸಿದ್ದಾರೆ.