ರಾಂಚಿ: ಇಬ್ಬರನ್ನು ಮದುವೆಯಾಗಿದ್ದ ಮಹಿಳೆ ಮೂರನೇ ಮದುವೆಯಾಗಿ ವಿದೇಶಕ್ಕೆ ಪರಾರಿಯಾಗುವ ಪ್ರಯತ್ನ ಅತ್ತೆಯಿಂದ ವಿಫಲವಾಗಿದೆ.
ಜಾರ್ಖಂಡ್ ಮೂಲದ ಮಹಿಳೆ 2015 ರಲ್ಲಿ ಗಿರಿಧ್ ಜಿಲ್ಲೆಯ ರಾಜ್ ಧಾನ್ವರ್ ನ ನಿಲಯ್ ಕುಮಾರ್ ಎಂಬುವವರನ್ನು ಮೊದಲಿಗೆ ಮದುವೆಯಾಗಿ ಎರಡು ವರ್ಷ ಸಂಸಾರ ನಡೆಸಿದ್ದಾಳೆ. ಆತನಿಂದ ಒಂದು ಕೋಟಿ ರೂಪಾಯಿ ಪಡೆದು ಕೈಕೊಟ್ಟಿದ್ದಾಳೆ.
ನಂತರ ಆಕೆ ಬಲೆ ಬೀಸಿದ್ದು ಗುಜರಾತ್ ನ ಅಮಿತ್ ಮೋದಿಗೆ. ಅಮಿತ್ ಮೋದಿಯನ್ನು ನಂಬಿಸಿ ಮದುವೆಯಾದ ಮಹಿಳೆ ಕುಟುಂಬ ಕಷ್ಟದಲ್ಲಿ ಇರುವುದಾಗಿ ಹೇಳಿ 45 ಲಕ್ಷ ರೂಪಾಯಿ ಪಡೆದುಕೊಂಡಿದ್ದಾಳೆ. ವಿಚ್ಛೇದನ ಸಿಗದಿದ್ದಾಗ ದೆಹಲಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ನಾಪತ್ತೆಯಾಗಿದ್ದಾಳೆ.
ಹೀಗೆ ಎರಡು ಮದುವೆಯಾಗಿದ್ದ ಮಹಿಳೆ ಪುಣೆಯ ಸುಮಿತ್ ದಶರಥ್ ಪವಾರ್ ಎಂಬುವರನ್ನು ವಂಚಿಸಿ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾಳೆ. ಕ್ಯಾಲಿಫೋರ್ನಿಯಾದಲ್ಲಿ ಸುಮಿತ್ ಕೆಲಸದಲ್ಲಿದ್ದು, ಮಹಿಳೆ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ಮಹಿಳೆ ಛಾತ್ರ ಜಿಲ್ಲೆಯ ಗ್ರಾಮದ ವಿಳಾಸ ನೀಡಿದ್ದಾಳೆ. ಈ ನಡುವೆ ಸುಮಿತ್ ತಾಯಿಯ ಕೈಗೆ ಮಹಿಳೆಯ ಫೋನ್ ಸಿಕ್ಕಿದ್ದು ಅದರಲ್ಲಿ ಆಕೆ ಈ ಹಿಂದೆ ಮದುವೆಯಾಗಿರುವ ಫೋಟೋಗಳು ಕಂಡುಬಂದಿವೆ. ವಿಚಾರಿಸಿದಾಗ ಆಕೆಯ ಬಣ್ಣ ಬಯಲಾಗಿದೆ. ಮ್ಯಾಟ್ರಿಮೋನಿ ವೆಬ್ಸೈಟ್ ಗಳಲ್ಲಿ ಹೊಸ ಪ್ರೊಫೈಲ್ ಕ್ರಿಯೇಟ್ ಮಾಡುತ್ತಿದ್ದ ಮಹಿಳೆ ಶ್ರೀಮಂತರಿಗೆ ಗಾಳ ಹಾಕಿ ವಂಚಿಸುತ್ತಿದ್ದಳು. ಪುಣೆ ಪೊಲೀಸರು ಆಕೆಯ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲು ಛಾತ್ರಾ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.