alex Certify ಇಲ್ಲಿದೆ ಆಸ್ಸಾಂ ರಾಜಕಾರಣದಲ್ಲಿ ತರುಣ್​ ಗೊಗಾಯ್​ ನಡೆದು ಬಂದ ಹಾದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಆಸ್ಸಾಂ ರಾಜಕಾರಣದಲ್ಲಿ ತರುಣ್​ ಗೊಗಾಯ್​ ನಡೆದು ಬಂದ ಹಾದಿ

ಆಸ್ಸಾಂನ ಮಾಜಿ ಮುಖ್ಯಮಂತ್ರಿ ತರುಣ್​ ಗೊಗಾಯ್​​ ಸೋಮವಾರ ಕೊರೊನಾದಿಂದಾಗಿ ಕೊನೆಯುಸಿರೆಳೆದಿದ್ದಾರೆ. ತರುಣ್​ ಗೊಗಾಯ್​ ಮೂರು ಬಾರಿ ಆಸ್ಸಾಂನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಆಸ್ಸಾಂ ರಾಜಕಾರಣದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ತರುಣ್​ ಗೊಗಾಯ್​​ ಏಪ್ರಿಲ್​ 1, 1936ರಂದು ಈ ಹಿಂದಿನ ಶಿವಸಾಗರ ಜಿಲ್ಲೆಯ ರಂಗಜನ್​ ಟೀ ಎಸ್ಟೆಟ್​ನಲ್ಲಿ ಜನಿಸಿದ್ರು. ಈಗ ಈ ಜಿಲ್ಲೆಗೆ ಜೋಹರತ್​ ಜಿಲ್ಲೆ ಎಂದು ಮರುನಾಮಕಾರಣ ಮಾಡಲಾಗಿದೆ.

ಡಾ.ಕಮಲೇಶ್ವರ ಗೊಗಾಯ್​ ಹಾಗೂ ಉಷಾ ಗೊಗಾಯ್​ ದಂಪತಿ ಪುತ್ರ ತರುಣ್​ ಗೊಗಾಯ್​​ ತಮ್ಮ ಪ್ರಾಥಮಿಕ ಶಿಕ್ಷಣವನ್ನ ರಂಗಜನ್​ ನಿಮ್ನಾ ಬುನಿಯಾಡಿ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ರು. ಜೋಹರತ್​​ನ ಮದರಸಾ ಶಾಲೆಯಲ್ಲಿ 4ನೇ ತರಗತಿ ಅಭ್ಯಾಸ ಮಾಡಿದ ಗೊಗಾಯ್​ ಮುಂದಿನ ವಿದ್ಯಾಭ್ಯಾಸವನ್ನ ಭೋಲಗುರಿ ಪ್ರೌಢಶಾಲೆಯಲ್ಲಿ ಪೂರ್ಣಗೊಳಿಸಿದ್ರು. ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಗೊಗಾಯ್​, ಜೋಹರತ್​​ನ ಜಗನ್ನಾಥ ಬರೂವಾ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಹಾಗೂ ಗುವಾಹಟಿ ವಿಶ್ವವಿದ್ಯಾಲಯದಲ್ಲಿ ಎಲ್​ಎಲ್​ಬಿ ಪದವಿ ಪಡೆದ್ರು.

1972ರಲ್ಲಿ ಡಾಲಿ ಗೊಗಾಯ್​ರನ್ನ ವಿವಾಹವಾದ ಗೊಗಾಯ್​ ದಂಪತಿಗೆ ಚಂದ್ರಿಮಾ ಗೊಗಾಯ್​ ಹಾಗೂ ಗೌರವ್​ ಗೊಗಾಯ್​ ಎಂಬ ಇಬ್ಬರು ಮಕ್ಕಳಿದ್ದಾರೆ. ಆರು ಬಾರಿ ಲೋಕಸಭಾ ಸಂಸದರಾಗಿದ್ದ ತರುಣ್​ ಗೊಗಾಯ್​​ ಮೊದಲ ಬಾರಿಗೆ ಜೊಹರತ್​ ಸಂಸದೀಯ ಕ್ಷೇತ್ರವನ್ನ ಪ್ರತಿನಿಧಿಸಿದ್ದರು. ಬಳಿಕ ಅವರು ಕಲಿಯಾಬೋರ್​ನಿಂದ ಆಯ್ಕೆಯಾದರು.

ಈ ಸಂದರ್ಭದಲ್ಲಿ ಗೊಗಾಯ್ 1991-1996 ರವರೆಗೆ ಅಂದಿನ ಸಿಎಂ ಪಿ.ವಿ. ನರಸಿಂಹ ರಾವ್​ ನೇತೃತ್ವದಲ್ಲಿ ಆಹಾರ ಸಂಸ್ಕರಣಾ ಹಾಗೂ ಉದ್ಯಮ ಇಲಾಖೆ ಕೇಂದ್ರ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಗೊಗಾಯ್​ 1991 – 1993ರಲ್ಲಿ ಆಹಾರ ಸಚಿವರಾಗಿದ್ದರು. 1993-1995ರಲ್ಲಿ ಆಹಾರ ಸಂಸ್ಕರಣಾ ಉದ್ಯಮಕ್ಕೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಇದಾದ ಬಳಿಕ ವಿದೇಶಾಂಗ ವ್ಯವಹಾರ, ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯ ಸೇರಿದಂತೆ ಸಾಕಷ್ಟು ಖಾತೆ ನಿರ್ವಹಿಸಿದ್ದಾರೆ. 1997ರಲ್ಲಿ ರಾಜ್ಯ ರಾಜಕಾರಣಕ್ಕೆ ಕಾಲಿಟ್ಟ ಗೊಗಾಯ್​ ಮೂರು ಬಾರಿ ಆಸ್ಸಾಂ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...