alex Certify ನಿಲ್ಲದ ಕೊರೊನಾ ರಣಕೇಕೆ: ʼಉತ್ತರ ಪ್ರದೇಶʼ ಎಲ್ಲಾ ಜಿಲ್ಲೆಗಳಲ್ಲಿ ಭಾನುವಾರ ಲಾಕ್​ಡೌನ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಲ್ಲದ ಕೊರೊನಾ ರಣಕೇಕೆ: ʼಉತ್ತರ ಪ್ರದೇಶʼ ಎಲ್ಲಾ ಜಿಲ್ಲೆಗಳಲ್ಲಿ ಭಾನುವಾರ ಲಾಕ್​ಡೌನ್​….!


ದೇಶದಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು ಬಹುತೇಕ ರಾಜ್ಯಗಳಲ್ಲಿ ಪರಿಸ್ಥಿತಿ ಕೈಮೀರ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ಈಗಾಗಲೇ ಸಾಕಷ್ಟು ಕ್ರಮಗಳನ್ನ ಕೈಗೊಂಡಿರುವ ಉತ್ತರ ಪ್ರದೇಶ ಸರ್ಕಾರ ಇದೀಗ ಪ್ರತಿ ಭಾನುವಾರ ರಾಜ್ಯದ ಪ್ರತಿಯೊಂದು ಜಿಲ್ಲೆಯನ್ನೂ ಲಾಕ್​ಡೌನ್ ಮಾಡಬೇಕೆಂದು ಆದೇಶ ಹೊರಡಿಸಿದೆ. ಮಾಸ್ಕ್​ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವವರಿಗೆ 1000 ರೂಪಾಯಿ ದಂಡ ವಿಧಿಸಲಾಗುತ್ತೆ. ದಂಡ ವಿಧಿಸದ ಬಳಿಕವೂ ತಪ್ಪು ಮರುಕಳಿಸಿದಲ್ಲಿ ದಂಡ ಮೊತ್ತಕ್ಕಿಂತ 10 ಪಟ್ಟು ಹೆಚ್ಚು ಹಣ ವಸೂಲಿ ಮಾಡುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಭಾನುವಾರ ಲಾಕ್​ಡೌನ್​ ಆದೇಶ ಜಾರಿಯಲ್ಲಿ ಇರಲಿದೆ. ಸ್ಯಾನಿಟೈಸೇಷನ್​ ಹಾಗೂ ತುರ್ತು ಸೇವೆಗಳು ಮಾತ್ರ ಈ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಉತ್ತರ ಪ್ರದೇಶ ಸಿಎಂ ಸಚಿವಾಲಯ ಹೇಳಿಕೆ ನೀಡಿದೆ.

ಮಾಸ್ಕ್​ ಇಲ್ಲದೇ ಅಡ್ಡಾಡುವವರಿಗೆ 1000 ರೂಪಾಯಿ ದಂಡ ಹಾಗೂ ಇದೇ ತಪ್ಪನ್ನ ಎರಡನೇ ಬಾರಿಗೆ ಮಾಡಿದ್ರೆ ಈ ದಂಡದ ಮೊತ್ತ 10 ಪಟ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್​ಗಳನ್ನ ಹೊಂದಿರುವ ಟಾಪ್​ 10 ರಾಜ್ಯಗಳಲ್ಲಿ ಉತ್ತರ ಪ್ರದೇಶ ಕೂಡ ಒಂದು. ಉತ್ತರ ಪ್ರದೇಶದಲ್ಲಿ ಗುರುವಾರ 22,439 ಹೊಸ ಕೊರೊನಾ ಕೇಸ್​ಗಳು ದಾಖಲಾಗಿವೆ. ಕಳೆದ ವರ್ಷದಿಂದ ಇಲ್ಲಿಯವರೆಗೆ ಇದೇ ಮೊದಲ ಬಾರಿಗೆ ಉತ್ತರ ಪ್ರದೇಶ ಇಷ್ಟು ದೊಡ್ಡ ಮೊತ್ತದ ಕೊರೊನಾ ಕೇಸ್​ಗಳನ್ನ ಒಂದೇ ದಿನದಲ್ಲಿ ವರದಿ ಮಾಡಿದ್ದಾಗಿದೆ.

ನಿನ್ನೆ ರಾಜ್ಯ ಸರ್ಕಾರ 10 ರಾಜ್ಯಗಳ ನೈಟ್​ ಕರ್ಫ್ಯೂ ಅವಧಿಯಲ್ಲೂ ಬದಲಾವಣೆ ಮಾಡಿದೆ. ಈ ಹಿಂದೆ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ಇದ್ದ ಸಮಯವನ್ನ ಇದೀಗ ರಾತ್ರಿ 8 ರಿಂದ ಬೆಳಗ್ಗೆ 7 ಗಂಟೆಯವರೆಗೆ ನಿಗದಿ ಮಾಡಲಾಗಿದೆ. ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈಮೀರುತ್ತಿರುವ ಹಿನ್ನೆಲೆ ಈ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...