ನವದೆಹಲಿ: ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದ್ದು ಈ ಕಾರ್ಯಕ್ರಮವನ್ನು ಸರ್ಕಾರಿ ಸ್ವಾಮ್ಯದ ಡಿಡಿ ನ್ಯಾಷನಲ್ ಮತ್ತು ಡಿಡಿ ನ್ಯೂಸ್ ಲೈವ್ ವಾಹಿನಿಗಳಲ್ಲಿ ನೇರ ಪ್ರಸಾರ ಮಾಡಲಾಗುವುದು.
ಪ್ರಧಾನಿ ನರೇಂದ್ರ ಮೋದಿ 40 ಕೆಜಿ ಬೆಳ್ಳಿ ಇಟ್ಟಿಗೆ ಇಟ್ಟು ದೇಗುಲದ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಆಗಸ್ಟ್ 5 ರಂದು ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಆಯೋಧ್ಯ ನಗರಿ ಶೃಂಗಾರಗೊಂಡಿದೆ. ಬಿಗಿಭದ್ರತೆ ಕೈಗೊಳ್ಳಲಾಗಿದೆ.
ಶಿಲಾನ್ಯಾಸ ಕಾರ್ಯಕ್ರಮವನ್ನು ಡಿಡಿಯಲ್ಲಿ ನೇರಪ್ರಸಾರ ಮಾಡಲಿದ್ದು, ಇರುವಲ್ಲಿಯೇ ಕಾರ್ಯಕ್ರಮ ವೀಕ್ಷಿಸಬಹುದಾಗಿದೆ. ನಾಳೆ ಸಂಜೆ 7 ಗಂಟೆಯಿಂದ 8 ಗಂಟೆಯವರೆಗೆ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿರುವ ಅಯೋಧ್ಯೆ ಕುರಿತಾದ ವಿಶೇಷ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗುವುದು. ಆಗಸ್ಟ್ 5 ರಂದು ಬೆಳಗ್ಗೆ 6 ಗಂಟೆಯಿಂದ ರಾಮಮಂದಿರ ಶಿಲಾನ್ಯಾಸ ಕುರಿತಾದ ವಿವಿಧ ಕಾರ್ಯಕ್ರಮ ಪ್ರಸಾರವಾಗಲಿವೆ ಎಂದು ಪ್ರಸಾರ ಭಾರತಿ ಮಾಹಿತಿ ನೀಡಿದೆ.