alex Certify ವಿದ್ಯಾರ್ಥಿಗಳೇ ಇತ್ತ ಗಮನಿಸಿ: ದೇಶದಲ್ಲಿವೆ 24 ನಕಲಿ ವಿಶ್ವವಿದ್ಯಾಲಯಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳೇ ಇತ್ತ ಗಮನಿಸಿ: ದೇಶದಲ್ಲಿವೆ 24 ನಕಲಿ ವಿಶ್ವವಿದ್ಯಾಲಯಗಳು..!

ಕರ್ನಾಟಕದಲ್ಲಿಯೂ ಸೇರಿದಂತೆ ದೇಶದಲ್ಲಿ ಒಟ್ಟು 24 ವಿವಿಗಳು ನಕಲಿ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಘೋಷಣೆ ಮಾಡಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಾಂಡಿಚೆರಿಗಳಲ್ಲಿ ತಲಾ ಒಂದು ನಕಲಿ ವಿವಿಗಳು ಇವೆ. ಇತ್ತ ಹೆಚ್ಚು ನಕಲಿ ವಿವಿಗಳು ಇರುವ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮೊದಲನೇ ಸ್ಥಾನದಲ್ಲಿದೆ. ಇಲ್ಲಿ ಒಟ್ಟು 8 ವಿವಿಗಳು ನಕಲಿ. ಹಾಗೂ ಎರಡನೇ ಸ್ಥಾನದಲ್ಲಿ ದೆಹಲಿ ಇದೆ. ಇಲ್ಲಿ ಒಟ್ಟು 7 ವಿವಿಗಳು ನಕಲಿ ವಿವಿಗಳು. ಇನ್ನು ಒಡಿಶಾದಲ್ಲಿ 2 ಹಾಗೂ ಪಶ್ಚಿಮ ಬಂಗಾಳದಲ್ಲಿ 2 ವಿವಿಗಳು ನಕಲಿ ವಿವಿಗಳಿವೆ.

ಇನ್ನು ಕರ್ನಾಟಕದಲ್ಲಿ ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯೂನಿವರ್ಸಿಟಿ ಎಜುಕೇಶನ್ ಸೊಸೈಟಿ ನಕಲಿ ವಿವಿ ಎಂದು ಹೇಳಲಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ ಹೇಳಿರುವ ಪ್ರಕಾರ, 24 ವಿವಿಗಳು ಸ್ವಯಂ ಘೋಷಿತ ವಿಶ್ವವಿದ್ಯಾನಿಲಯಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ವಿವಿಗಳು ಯಾವುದೇ ಪದವಿ ನೀಡುವಂತಹ ಅಧಿಕಾರವನ್ನು ಹೊಂದಿಲ್ಲ ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿದ್ದಾರೆ.

ಇನ್ನು ಈ 24 ವಿವಿಗಳು ಯಾವವು ಎಂದು ನೋಡೋದಾದರೆ

ಉತ್ತರ ಪ್ರದೇಶದಲ್ಲಿ ವಾರಣೇಶ್ಯ ಸಂಸ್ಕೃತ ವಿಶ್ವವಿದ್ಯಾಲಯ, ವಾರಣಾಸಿಯಲ್ಲಿ ಮಹಿಲ ಗ್ರಾಮ ವಿದ್ಯಾಪಿತ್, ಅಲಹಾಬಾದ್‌ನಲ್ಲಿ ಗಾಂಧಿ ಹಿಂದಿ ವಿದ್ಯಾಪಿತ್, ನ್ಯಾಷನಲ್ ಯೂನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪತಿ, ಕಾನ್ಪುರದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಓಪನ್ ಯೂನಿವರ್ಸಿಟಿ, ಅಲಿಗಡನಲ್ಲಿ ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಮಥುರಾದಲ್ಲಿ ಮಹಾರಾಣಾ ಪ್ರತಾಪ್ ಶಿಕ್ಷ ನಿಕೇತನ್ ವಿಶ್ವವಿದ್ಯಾಲಯ, ನೋಯ್ಡಾದಲ್ಲಿ ಪ್ರತಾಪಗಡ ಮತ್ತು ಇಂದ್ರಪ್ರಸ್ಥ ಶಿಕ್ಷಾ ಪರಿಷತ್.

ಇತ್ತ ದೆಹಲಿಯಲ್ಲಿರುವ ನಕಲಿ ವಿವಿಗಳೆಂದರೆ, ಕಮರ್ಷಿಯಲ್ ಯೂನಿವರ್ಸಿಟಿ ಲಿಮಿಟೆಡ್, ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿ, ವೊಕೇಶನಲ್ ಯೂನಿವರ್ಸಿಟಿ, ಎಡಿಆರ್ ಕೇಂದ್ರಿತ ನ್ಯಾಯಾಂಗ ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಸ್ಥೆ, ವಿಶ್ವಕರ್ಮ ಸ್ವಯಂ ಉದ್ಯೋಗಕ್ಕಾಗಿ ಮುಕ್ತ ವಿಶ್ವವಿದ್ಯಾಲಯ ಮತ್ತು ಆಧ್ಯಾತ್ಮಿಕ ವಿಶ್ವವಿದ್ಯಾಲಯ.

ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿರುವ ಕಾರ್ಯನಿರ್ವಹಿಸುತ್ತಿರುವ ನಕಲಿ ವಿವಿಗಳೆಂದರೆ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್, ಕೋಲ್ಕತಾದಲ್ಲಿ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್, ನಬಭರತ್ ಶಿಕ್ಷಾ ಪರಿಷತ್, ರೂರ್ಕೆಲಾ ಮತ್ತು ಉತ್ತರ ಒರಿಸ್ಸಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ.

ಮಹಾರಾಷ್ಟ್ರದಲ್ಲಿ ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಪುದುಚೇರಿಯಲ್ಲಿ ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯೂನಿವರ್ಸಿಟಿ, ಆಂಧ್ರಪ್ರದೇಶದಲ್ಲಿ ರಾಜಾ ಅರೇಬಿಕ್ ವಿಶ್ವವಿದ್ಯಾಲಯ, ನಾಗ್ಪುರದಲ್ಲಿ ಕೇರಳದ ಸೇಂಟ್ ಜಾನ್ಸ್ ವಿಶ್ವವಿದ್ಯಾಲಯ ನಕಲಿ ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...