ಗುಜರಾತ್‌ನ ಗಿರ್ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರಲ್ಲಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ ಸಿಂಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.
ಗುಜರಾತ್‌ನ ಜುನಾಗಡ ಜಿಲ್ಲೆಯ ಖೊಡಾದಾ ಗ್ರಾಮದಲ್ಲಿ ಈ ಘಟನೆ ಜರುಗಿದೆ. ತನ್ನ ಬೇಟೆ ಬೆನ್ನತ್ತಿ ಹೊರಟ ಸಿಂಹ ಆಯ ತಪ್ಪಿ ಬಾವಿಗೆ ಬಿದ್ದಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿ ಪಿ.ಡಿ. ಚುದಾಸ್ಮಾ ತಿಳಿಸಿದ್ದಾರೆ.
ನಾಲ್ಕು ಗಂಟೆಗೂ ಹೆಚ್ಚು ಅವಧಿ ನಡೆದ ರಕ್ಷಣಾ ಕಾರ್ಯಚರಣೆಯಲ್ಲಿ ಸಿಂಹದ ಸುತ್ತ ಹಗ್ಗ ಕಟ್ಟಿ ಮೇಲೆತ್ತಲಾಗಿದೆ. ಸಿಂಹಕ್ಕೆ ಗಾಯಗಳಾಗಿದ್ದಲ್ಲಿ ಆರೈಕೆ ಮಾಡಲೆಂದು ಅದನ್ನು ಸದ್ಯದ ಮಟ್ಟಿಗೆ ಆರೈಕೆ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.