
ನ್ಯಾಷನಲ್ ಜಿಯಾಗ್ರಾಫಿಕ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ತುಣುಕಿನಲ್ಲಿ ಗೊರ್ಡೋನ್ ದಕ್ಷಿಣ ಭಾರತದ ಮನೆಯೊಂದಕ್ಕೆ ಭೇಟಿ ನೀಡಿರೋದನ್ನ ಕಾಣಬಹುದಾಗಿದೆ.
ಭಾರತೀಯ ಖಾದ್ಯ ತಿಂದ ಗೊರ್ಡೋನ್ ಮಸಾಲೆ ಜಾಸ್ತಿಯಾದ ಹಿನ್ನೆಲೆ ನೀರು ಬೇಕೆಂದು ಹೇಳುತ್ತಾರೆ. ಕೂಡಲೇ ಅಲ್ಲಿದ್ದ ಮಹಿಳೆಯೊಬ್ಬರು ಅಡುಗೆಯಲ್ಲಿ ಮಸಾಲೆ ಜಾಸ್ತಿಯಾದರೆ ಅದನ್ನ ಕಡಿಮೆ ಮಾಡೋಕೆ ಒಂದು ಮಾರ್ಗವಿದೆ ಎಂದು ಹೇಳುತ್ತಾಳೆ. ತೆಂಗಿನ ಕಾಯಿ ತುರಿದು ಹಾಕಿದ್ರೆ ಅಡುಗೆಯ ಖಾರದ ಅಂಶ ಕಡಿಮೆಯಾಗುತ್ತೆ ಎಂದು ವಿವರಿಸುತ್ತಾಳೆ. ಆದರೆ ಕಾಯಿ ಮಣೆಯಲ್ಲಿ ಕಾಯಿ ತುರಿಯೋದನ್ನ ನೋಡಿ ಆಶ್ಚರ್ಯ ಹೊರಹಾಕಿದ ಗೊರ್ಡೋನ್ಸ್ ಇದೊಂದು ವಿಚಿತ್ರವಾದ ಯೋಗದ ಭಂಗಿ ಎಂದು ಹೇಳಿದ್ದಾರೆ.
ಗೊರ್ಡೋನ್ ರಾಮ್ಸೆ ಭಾರತ ಹಾಗೂ ಇಲ್ಲಿನ ಸಂಸ್ಕೃತಿಯ ಅಭಿಮಾನಿಯಾಗಿರೋದ್ರಿಂದ ಭಾರತದಲ್ಲಿ ರೆಸ್ಟಾರೆಂಟ್ ಒಂದನ್ನ ತೆರೆಯಬಯಸುತ್ತೇನೆ ಎಂದು ಈ ಹಿಂದೆ ಹಲವು ಭಾರೀ ಹೇಳಿದ್ದಾರೆ.