
ರಾಜಸ್ಥಾನದಲ್ಲೂ ಕೊರೊನಾ ಪ್ರಕರಣಗಳನ್ನ ಗಮನದಲ್ಲಿ ಇಟ್ಟುಕೊಂಡು ಮದುವೆ ಕಾರ್ಯಕ್ರಮಗಳಿಗೆ ಕೇವಲ 50 ಮಂದಿ ಅತಿಥಿಗಳ ಉಪಸ್ಥಿತಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ಮದುವೆಗೆ ತೆರಳಲು ರಜೆ ಸಿಗದ ಕಾರಣ ಆಶಾ ರೋಠ್ ಎಂಬ ಪೊಲೀಸ್ ಪೇದೆಯೊಬ್ಬರು ಠಾಣೆಯಲ್ಲಿ ಅರಿಶಿಣ ಶಾಸ್ತ್ರವನ್ನ ಮಾಡಿಕೊಳ್ಳೋದರ ಮೂಲಕ ಸುದ್ದಿಯಾಗಿದ್ದರು.
ಇದೀಗ ಝುಂಝು ಜಿಲ್ಲೆಯ ಬುಹಾನಾ ಠಾಣೆಯ ಸಿಬ್ಬಂದಿ ತಮ್ಮ ಸಹೋದ್ಯೋಗಿ ಸೋನಿಯಾ ಎಂಬವರಿಗೆ ಠಾಣೆಯಲ್ಲೇ ಬಿಂದೋರಿ ಕಾರ್ಯಕ್ರಮವನ್ನ ನೆರವೇರಿಸಿದ್ದಾರೆ. ಬಿಂದೊರಿ ಅನ್ನೋದು ರಾಜಸ್ಥಾನದಲ್ಲಿ ಮದುವೆಗೂ ಮುನ್ನ ವಧುವಿಗೆ ಮಾಡುವ ಶಾಸ್ತ್ರಗಳಲ್ಲಿ ಒಂದಾಗಿದೆ . ಈ ಶಾಸ್ತ್ರದ ಪ್ರಕಾರ ನವವಧುವನ್ನ ಕುದುರೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ಮದುವೆಯಾಗುವ ಮುನ್ನ ಇದರ ಮೂಲಕ ಮದುವಣಗಿತ್ತಿ ದೇವಸ್ಥಾನಕ್ಕೆ ಹೋಗುತ್ತಾಳೆ.
ಕೋವಿಡ್ ರೋಗಿಗಳ ಸೇವೆಗೆ ನಿಂತ ನಾಲ್ಕು ತಿಂಗಳ ಗರ್ಭಿಣಿ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸೋನಿಯಾ ಸಲ್ವಾರ್ ಕಮೀಜ್ನ್ನು ಧರಿಸಿದ್ದಾರೆ. ನನ್ನ ಬಿಂದೋರಿ ಶಾಸ್ತ್ರಕ್ಕೆ ಸಹೋದ್ಯೋಗಿಗಳು ಕುಟುಂಬಸ್ಥರಂತೆ ಕಾರ್ಯ ಮಾಡಿದ್ದಾರೆ. ಕೊರೊನಾ ಮಾರ್ಗಸೂಚಿಗಳನ್ನ ಗಮನದಲ್ಲಿರಿಸಿ ಈ ಶಾಸ್ತ್ರವನ್ನ ನೆರವೇರಿಸಿದ್ದಾರೆ. ನನಗೆ ಇದು ತುಂಬಾನೇ ಇಷ್ಟವಾಗಿದೆ ಎಂದು ಸೋನಿಯಾ ಹೇಳಿದ್ರು.
