ಕೊರೊನಾ ನಿಯಂತ್ರಣಕ್ಕಾಗಿ ಘೋಷಿಸಿದ್ದ ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಹಣಕಾಸು ಹೊಂದಿಸಿಕೊಳ್ಳಲು ಕೇಂದ್ರ ಸರ್ಕಾರ ಈಗ ಮಹತ್ವದ ತೀರ್ಮಾನ ಕೈಗೊಂಡಿದೆ. ಜೀವ ವಿಮಾ ನಿಗಮದ ಶೇಕಡ 25 ರಷ್ಟು ಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ಪೂರಕ ಪ್ರಕ್ರಿಯೆಗಳು ಆರಂಭವಾಗಿವೆ.
ಷೇರುಗಳ ಮಾರಾಟಕ್ಕಾಗಿ ನೀತಿ ಆಯೋಗ ಈಗಾಗಲೇ ಷೇರು ಪೇಟೆ ನಿಯಂತ್ರಕ ಸೆಬಿಗೆ ಕರಡು ಪ್ರತಿಯನ್ನು ಸಲ್ಲಿಕೆ ಮಾಡಿದ್ದು, ಶೇಕಡಾ 25 ಷೇರುಗಳ ಮಾರಾಟವಾದರೆ ಸರ್ಕಾರದ ಪಾಲು ಶೇ. 75ಕ್ಕೆ ಇಳಿಕೆಯಾಗಲಿದೆ.
ಇದರ ಜೊತೆಗೆ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ ಶೇಕಡ 15 ರಿಂದ 20 ಷೇರುಗಳನ್ನು ಸಹ ಮಾರಾಟ ಮಾಡಲು ಸಹ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ವಿರೋಧವೂ ವ್ಯಕ್ತವಾಗುತ್ತಿದ್ದು, ಪ್ರತಿಪಕ್ಷಗಳು ಈ ವಿಷಯವನ್ನಿಟ್ಟುಕೊಂಡು ದೇಶವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿವೆ.