ಪಿಂಚಣಿದಾರರಿಗೆ ನೌಕರಿ ನಂತರವೂ ಮನೆ ನಡೆಸೋದು ಸುಲಭ. ಆದ್ರೆ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಪಿಂಚಣಿ ಸೌಲಭ್ಯವಿರುವುದಿಲ್ಲ. ನಿವೃತ್ತಿ ನಂತರ ಖರ್ಚಿಗೇನು ಮಾಡೋದು ಅನ್ನೋ ಆತಂಕ ಇದ್ದೇ ಇರುತ್ತದೆ. ಸ್ವಂತ ವ್ಯಾಪಾರ, ಉದ್ಯಮ ನಡೆಸುವವರಿಗೂ ಇದೇ ಸಮಸ್ಯೆ. ಅವರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಎಲ್‌ಐಸಿ ಕೂಡ ಅದ್ಭುತ ಪ್ರಯೋಜನಗಳುಳ್ಳ ಯೋಜನೆಯೊಂದನ್ನು ರೂಪಿಸಿದೆ. ಇದರ ಅಡಿಯಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದ್ರೆ ಜೀವನ ಪರ್ಯಂತ ಪಿಂಚಣಿಯ ಲಾಭ ಪಡೆಯಬಹುದು.
ಜೀವನ್ ಅಕ್ಷಯ್ ಯೋಜನೆLIC
ಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ಭಾರತದಲ್ಲಿನ ಅತಿದೊಡ್ಡ ಮತ್ತು ಸರ್ಕಾರಿ ವಿಮಾ ಕಂಪನಿಯಾಗಿದೆ. ನೀವೂ ಸಹ ಉತ್ತಮ LIC ಪಾಲಿಸಿಯನ್ನು ಖರೀದಿಸಲು ಬಯಸಿದರೆ, ಜೀವನ್ ಅಕ್ಷಯ್ ಯೋಜನೆಯನ್ನು ಪರಿಗಣಿಸಬಹುದು. ಈ ಪಾಲಿಸಿಯಲ್ಲಿ ನೀವು ಒಮ್ಮೆ ಮಾತ್ರ ಹೂಡಿಕೆ ಮಾಡಬೇಕಾಗುತ್ತದೆ, ನಂತರ ಪ್ರತಿ ತಿಂಗಳು, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಪಿಂಚಣಿ ಪಡೆಯಬಹುದು.
ಪ್ರತಿ ತಿಂಗಳು 20 ಸಾವಿರ ರೂಪಾಯಿ ಪಿಂಚಣಿ!
ಹೂಡಿಕೆದಾರರ ವಯಸ್ಸು 75 ವರ್ಷವಾಗಿದ್ದರೆ, ಅವರು 6,10,800 ರೂ. ಮೊತ್ತದ ಪ್ರೀಮಿಯಂ ಅನ್ನು ಠೇವಣಿ ಮಾಡಬೇಕಾಗುತ್ತದೆ. ಇದರ ಮೇಲೆ ಅವರ ವಿಮಾ ಮೊತ್ತ 6 ಲಕ್ಷ ರೂಪಾಯಿ. ಈ ಮೂಲಕ ವಾರ್ಷಿಕ ಪಿಂಚಣಿ 76 ಸಾವಿರದ 650 ರೂ ಆದ್ರೆ, ಅರ್ಧ ವಾರ್ಷಿಕ ಪಿಂಚಣಿ 37 ಸಾವಿರದ 35 ರೂಪಾಯಿ. ತ್ರೈಮಾಸಿಕ ಪಿಂಚಣಿ 18 ಸಾವಿರದ 225 ರೂಪಾಯಿ. ಮಾಸಿಕ 6 ಸಾವಿರದ 08 ರೂಪಾಯಿ ಪಿಂಚಣಿ ಸಿಗುತ್ತದೆ. ಜೀವನ್ ಅಕ್ಷಯ್ ಯೋಜನೆಯಡಿ ವಾರ್ಷಿಕ 12,000 ಪಿಂಚಣಿ ಇದೆ. ಈ ಪಿಂಚಣಿ, ಹೂಡಿಕೆದಾರರಿಗೆ ಅವರ ಮರಣದವರೆಗೂ ಲಭ್ಯವಿರುತ್ತದೆ. ನೀವು ಪ್ರತಿ ತಿಂಗಳು 20 ಸಾವಿರ ರೂಪಾಯಿ ಪಿಂಚಣಿ ತೆಗೆದುಕೊಳ್ಳಬೇಕಾದರೆ, ನೀವು ಒಮ್ಮೆಲೇ 40,72,000 ರೂಪಾಯಿಗಳನ್ನು ಹೂಡಿಕೆ ಮಾಡಬೇಕು.
ಪಾಲಿಸಿಯ ಪ್ರಯೋಜನಗಳು
ಈ ಯೋಜನೆಯಲ್ಲಿ ಇತರ ಹಲವು ಪ್ರಯೋಜನಗಳಿವೆ. ಈ ಪಾಲಿಸಿಯನ್ನು ಖರೀದಿಸಿದ ಮೂರು ತಿಂಗಳ ನಂತರ ಮಾತ್ರ ನೀವು ಸಾಲವನ್ನು ತೆಗೆದುಕೊಳ್ಳಬಹುದು. ಈ ಪಾಲಿಸಿಯಲ್ಲಿ ಹೂಡಿಕೆಯ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಆದರೆ ನೀವು ಈ ಯೋಜನೆಯಲ್ಲಿ ಕನಿಷ್ಠ 1 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು ಎಂಬ ನಿಯಮವಿದೆ.