ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ಅರಣ್ಯ ವಲಯದಲ್ಲಿ ಕೆಲವು ದಿನಗಳ ಹಿಂದೆ ನಾಲ್ಕು ಚಿರತೆ ಮರಿಗಳು ಬಂದಿದ್ದವು. ಅಮ್ಮನಿಂದ ಬೇರ್ಪಟ್ಟಿದ್ದ ಚಿರತೆ ಮರಿಗಳನ್ನು ರಕ್ಷಿಸುವ ಹೊಣೆ ಅರಣ್ಯ ಇಲಾಖೆ ಸಿಬ್ಬಂದಿ ಹೊತ್ತುಕೊಂಡಿತ್ತು.
ಅರಣ್ಯ ಇಲಾಖೆ ಸಿಬ್ಬಂದಿ ಅಮ್ಮನ ಜೊತೆ ಮರಿಗಳನ್ನು ಸೇರಿಸಲು ಸಾಕಷ್ಟು ಪ್ರಯತ್ನಪಟ್ಟರು. ಹಗಲು ರಾತ್ರಿ ಕಾಡು ಅಲೆದು, ಅಲ್ಲಲ್ಲಿ ಸಿಸಿ ಟಿವಿ ಅಳವಡಿಸಿ ತಾಯಿಯ ಹುಡುಕಾಟ ನಡೆಸಿದ್ದರು. 15 ದಿನಗಳ ನಂತ್ರ ತಾಯಿ ಚಿರತೆ ಸಿಕ್ಕಿತ್ತು. ಆದ್ರೆ ಮಕ್ಕಳನ್ನು ತಾಯಿ ಚಿರತೆ ನೋಡಲೂ ಇಲ್ಲ. ತಾಯಿಗೆ ಬೇಡವಾದ ಮರಿಗಳನ್ನು ಈಗ ಅರಣ್ಯ ಇಲಾಖೆ ಮುಖ್ಯ ಕಚೇರಿಗೆ ತಂದಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಚಿರತೆ ಮರಿಗಳ ರಕ್ಷಣೆ ನಡೆಯುತ್ತಿದೆ. ಈ ಚಿರತೆ ಮರಿಗಳು ಮೇಕೆ ಹಾಲು ಕುಡಿದು ಬೆಳೆಯುತ್ತಿವೆ ಎಂಬುದು ವಿಶೇಷ.