ಈಗ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಚಿತ್ರಗಳು ನಮ್ಮ ಕಣ್ಣಿಗೆ ಭ್ರಮೆ ಹುಟ್ಟಿಸುವಂತಿರುತ್ತವೆ. ಕೆಲವು ನಿಜವಾದ ಫೋಟೋಗಳಾಗಿದ್ದರೆ, ಇನ್ನೂ ಹಲವು ಆ್ಯಪ್ ಗಳ ಮೂಲಕ ಸೃಷ್ಟಿ ಮಾಡಿದ್ದು, ಮಾರ್ಫ್ ಮಾಡಿದ್ದಾಗಿರುತ್ತದೆ.
ಆದರೆ, ಇಲ್ಲೊಂದು ನಿಜವಾದ ಫೋಟೋ ಕಣ್ಣಿಗೆ ಭ್ರಮೆ ಹುಟ್ಟಿಸುವಂತಿದೆ.
ಎರಡು ಜೀಬ್ರಾಗಳು ಅಕ್ಕಪಕ್ಕದಲ್ಲಿ ನಿಂತು ತಲೆಯನ್ನು ಎದುರಿಗೆ ತಿರುಗಿಸಿಕೊಂಡಿವೆ. ಆದರೆ, ಎರಡೂ ಪ್ರಾಣಿಗಳಿಗೆ ಒಂದೇ ತಲೆ ಇದ್ದಂತೆ ಕಾಣುತ್ತದೆ.
ವನ್ಯಜೀವಿ ಛಾಯಾಗ್ರಾಹಕ ಸರೋಶ್ ಲೋಧಿ ಎಂಬುವವರು ಟ್ವಿಟರ್ ನಲ್ಲಿ ಫೋಟೋ ಪ್ರಕಟಿಸಿದ್ದಾರೆ. “ಯಾವ ಜೀಬ್ರಾ ಮುಂದೆ ನಿಂತಿದೆ…? ಎಡದ್ದೋ..? ಬಲದ್ದೋ..? ಹೇಳಿ” ಎಂದು ಸವಾಲು ಹಾಕಿದ್ದಾರೆ. ಇದನ್ನು ಹೇಳಲು ನೆಟ್ಟಿಗರು ಸಾಕಷ್ಟು ತಲೆ ಕೆಡಿಸಿಕೊಂಡಿದ್ದಾರೆ.
https://twitter.com/Kannaninradhai/status/1280494263881605120?ref_src=twsrc%5Etfw%7Ctwcamp%5Etweetembed%7Ctwterm%5E1280494263881605120%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fleft-or-right-netizens-try-to-figure-out-which-zebra-is-in-the-front-in-viral-photo%2F618851