ಹಬ್ಬದ ಮಾಸದಲ್ಲಿ ಕೋವಿಡ್-19 ನಿಯಂತ್ರಣದ ಮಾರ್ಗಸೂಚಿಗಳ ಉಲ್ಲಂಘನೆ ಮಾಡಿದಲ್ಲಿ ಚಳಿಗಾಲದ ಒಂದೇ ಒಂದು ತಿಂಗಳಲ್ಲಿ ದೇಶದಲ್ಲಿ 26 ಲಕ್ಷ ಹೊಸ ಕೋವಿಡ್-19 ಸೋಂಕುಗಳು ದಾಖಲಾಗಲಿವೆ ಎಂಬ ವಾರ್ನಿಂಗ್ ಒಂದು ವರದಿಯಾಗಿದೆ.
ದೇಶದಲ್ಲಿ ಕೊರೋನಾ ವೈರಸ್ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೋವಿಡ್-19 ಸಾಂಕ್ರಮಿಕದ ಸಂಬಂಧ ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿಯೊಂದು ಹೀಗೆ ವಾರ್ನಿಂಗ್ ಮಾಡಿದೆ.
ನೀತಿ ಆಯೋಗದ ಸದಸ್ಯರಾದ ವಿ.ಕೆ. ಪೌಲ್ ನೇತೃತ್ವದ 10 ಸದಸ್ಯರ ಸಮಿತಿಯೊಂದು, ಲಾಕ್‌ಡೌನ್ ಹಾಗೂ ಸಾಂಕ್ರಮಿಕದ ಇತರೆ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡಿ ಮೇಲ್ಕಂಡ ಅಂಕಿಸಂಖ್ಯೆಯನ್ನು ಘೋಷಣೆ ಮಾಡಿದೆ. ಹಬ್ಬದ ಮಾಸದಲ್ಲಿ ಜನರು ಎಚ್ಚರಿಕೆಯನ್ನು ಗಾಳಿಗೆ ತೂರುವ ಸಾಧ್ಯತೆ ಇರುವ ಕಾರಣ ಹೀಗೆಲ್ಲಾ ಆಗುವ ಸಾಧ್ಯತೆಗಳಿವೆ ಎಂದು ಸಮಿತಿ ತಿಳಿಸಿದೆ.