ನವದೆಹಲಿ: ಸ್ವಾಮಿ ಚಿನ್ಮಯಾನಂದ ಅವರ ಮೇಲೆ ಕಾನೂನು ವಿದ್ಯಾರ್ಥಿನಿ ಹೂಡಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಹಿಂಪಡೆದಿದ್ದು, ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.
2019 ಆಗಸ್ಟ್ ನಲ್ಲಿ ಉತ್ತರಪ್ರದೇಶದ ಕಾನೂನು ವಿದ್ಯಾರ್ಥಿನಿ, ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ಅವರ ಮೇಲೆ ಅತ್ಯಾಚಾರ ಆರೋಪ ಮಾಡಿದ್ದರು. ಉತ್ತರಪ್ರದೇಶ ಪೊಲೀಸ್ ಚಿನ್ಮಯಾನಂದ ಮೇಲೆ ಎಫ್.ಐ.ಆರ್. ದಾಖಲಿಸಿ, ಅವರನ್ನು ಬಂಧಿಸಿದ್ದರು. ನಂತರ ಅವರಿಗೆ ಜಾಮೀನು ನೀಡಲಾಗಿತ್ತು.
ಯುವತಿ ಮತ್ತು ಅವಳ ಇಬ್ಬರು ಸ್ನೇಹಿತರು ಚಿನ್ಮಯಾನಂದರ ಬಳಿ ಐದು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಅವರ ಮೇಲೆ ಕೇಸ್ ದಾಖಲಿಸಿ ಅವರನ್ನು ಬಂಧಿಸಲಾಗಿತ್ತು. ಒಂದು ತಿಂಗಳ ಬಳಿಕ ಜಾಮೀನು ಪಡೆದು ಅವರುಗಳು ಹೊರಬಂದಿದ್ದರು.
ಒಂದು ವರ್ಷದ ಬಳಿಕ ಯುವತಿ, ತಾನು ಸ್ವಾಮಿ ಚಿನ್ಮಯಾನಂದ ಅವರ ಶತ್ರುಗಳ ಒತ್ತಡದ ಮೇಲೆ ಆರೋಪ ಮಾಡಿದ್ದಾಗಿ ವಿಶೇಷ ಸಮಿತಿಯ ಮುಂದೆ ಹೇಳಿಕೆ ನೀಡಿದ್ದು, ಈ ವರ್ಷ ಅಕ್ಟೋಬರ್ ನಲ್ಲಿ ಕೇಸ್ ನ್ನು ಹಿಂಪಡೆದಿದ್ದಾಳೆ. ವಿಶೇಷ ಕೋರ್ಟ್ ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.