ನವದೆಹಲಿ: ಆಪ್ ನಿಷೇಧದ ನಂತರ ಚೀನಾಕ್ಕೆ ಭಾರತ ಮತ್ತೊಂದು ಶಾಕ್ ನೀಡಿದೆ. ಚೀನಾ ಭಾಷೆಗೂ ಕೇಂದ್ರ ಸರ್ಕಾರ ಕೊಕ್ ಕೊಟ್ಟಿದ್ದು, ಶಿಕ್ಷಣ ನೀತಿಯಲ್ಲಿ ಮ್ಯಾಂಡರಿನ್ ಭಾಷೆಯನ್ನು ಕೈ ಬಿಡಲಾಗಿದೆ.
ಗಲ್ವಾನ್ ಗಡಿ ಪ್ರದೇಶದಲ್ಲಿ ಭಾರತ, ಚೀನಾ ಸೈನಿಕರ ನಡುವೆ ಸಂಘರ್ಷ ಉಂಟಾದ ನಂತರ ಚೀನಿ ಆಪ್ ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ವಿದೇಶಿ ಭಾಷೆಗಳ ಕಲಿಕೆ ವಿಭಾಗದಿಂದ ಚೀನಾದ ಮ್ಯಾಂಡರಿನ್ ಭಾಷೆಯನ್ನು ಕೈಬಿಡುವ ಮೂಲಕ ಮತ್ತೊಂದು ಶಾಕ್ ನೀಡಿದೆ.
ಶಿಕ್ಷಣ ನೀತಿಯ ಕರಡಿನಲ್ಲಿ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಜಪಾನ್, ಸ್ಪ್ಯಾನಿಷ್ ಮೊದಲಾದ ಭಾಷೆಗಳನ್ನು ಕಲಿಯಲು ಅವಕಾಶ ನೀಡಲಾಗಿದ್ದು, ಈಗ ವಿದೇಶಿ ಭಾಷೆಗಳ ಪಟ್ಟಿಯಲ್ಲಿ ಮ್ಯಾಂಡರಿನ್ ಭಾಷೆಯನ್ನು ಕೈಬಿಡಲಾಗಿದೆ.