
ಮಾಸ್ಕ್ ಹಾಕಿಕೊಳ್ಳದೇ ಮಾತನಾಡುತ್ತಿದ್ದ ವ್ಯಕ್ತಿಗೆ ಲಲ್ಲನ್ಟಾಪ್ ಟಿವಿ ರಿಪೋರ್ಟರ್ ಮಾಸ್ಕ್ ಹಾಕಿಕೊಳ್ಳಿ. ನಿಮ್ಮ ಬಾಯಿಯಿಂದ ಎಂಜಲು ಸಿಡಿಯುತ್ತಿದೆ ಎಂದು ಹೇಳಿದ್ದರು.
ಆದರೆ ಇದನ್ನ ತಲೆಗೆ ಹಾಕಿಕೊಳ್ಳದ ವ್ಯಕ್ತಿ ಮಾತನಾಡುತ್ತಲೇ ಇದ್ದರು. ಆದರೆ ಅಲ್ಲೇ ಹಿಂದೆ ಇದ್ದ ಆ ವ್ಯಕ್ತಿಯ ಗೆಳೆಯ ಕೂಡಲೇ ಮಾಸ್ಕ್ನ್ನ ತೆಗೆದು ಈತನ ಮುಖಕ್ಕೆ ತೊಡಿಸಿದ್ದಾರೆ.
ಲೈವ್ನಲ್ಲೇ ಈ ದೃಶ್ಯ ನಡೆದಿದ್ದು ರಿಪೋರ್ಟರ್ ಹಾಗೂ ಅಲ್ಲಿ ನೆರೆದಿದ್ದವರು ಬಿದ್ದು ಬಿದ್ದು ನಕ್ಕಿದ್ದಾರೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದಹಾಗೆ ಈ ಘಟನೆ ಬಿಹಾರದಲ್ಲಿ ನಡೆದಿದೆ.