alex Certify BIG NEWS: ಲಕ್ಷದ್ವೀಪದಲ್ಲಿ ವರದಿಯಾಯ್ತು ಮೊದಲ ಕೊರೊನಾ ಪಾಸಿಟಿವ್​ ಕೇಸ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಕ್ಷದ್ವೀಪದಲ್ಲಿ ವರದಿಯಾಯ್ತು ಮೊದಲ ಕೊರೊನಾ ಪಾಸಿಟಿವ್​ ಕೇಸ್​..!

ದೇಶದಲ್ಲಿ ಕೊರೊನಾ ವೈರಸ್​ ಹರಡಿ ಸುಮಾರು 1 ವರ್ಷಗಳ ಬಳಿಕ ಸೋಮವಾರ ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾಗಿದೆ.

ಇಂಡಿಯಾ ರಿಸರ್ವ್​ ಬೆಟಾಲಿಯನ್​​ಗೆ ಸೇರಿದ ಈ ವ್ಯಕ್ತಿ ಜನವರಿ 3ರಂದು ಕೊಚ್ಚಿಯಿಂದ ಹಡಗಿನ ಮೂಲಕ ಕವರಟ್ಟಿಗೆ ತೆರಳಿದ್ದರು ಎನ್ನಲಾಗಿದೆ. ಇವರ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ಆದರೆ ಸೋಂಕಿತ ದ್ವೀಪಗಳ ನಿವಾಸಿ ಅಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಚ್ಚಿಯಿಂದ ಆಗಮಿಸುವವರಿಗೆ ಕಡ್ಡಾಯವಾದ ಕ್ವಾರಂಟೈನ್​​ ತಪ್ಪಿಸುವ ಮೂಲಕ ಲಕ್ಷದ್ವೀಪ ಆಡಳಿತವು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಪರಿಷ್ಕರಿಸಿದ ಎರಡು ವಾರಗಳ ನಂತರ ಈ ಪ್ರಕರಣ ವರದಿಯಾಗಿದೆ. ಲಕ್ಷ ದ್ವೀಪದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ವರದಿಯಾಗಿರಲಿಲ್ಲ.

ದ್ವೀಪಗಳು ಇಲ್ಲಿಯವರೆಗೆ ಒಂದೇ ಧನಾತ್ಮಕ ಕೋವಿಡ್ -19 ಪ್ರಕರಣವನ್ನು ವರದಿ ಮಾಡಿಲ್ಲ. ಸೋಂಕಿತನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್​ ಮಾಡಲು ನಿರ್ದೇಶಿಸಲಾಗಿದೆ. ಅಲ್ಲದೇ ಪ್ರಾಥಮಿಕ ಸಂಪರ್ಕಿತರ ಮಾದರಿಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...