ಉತ್ತರಪ್ರದೇಶದ ಲಖೀಮ್ ಪುರ್ ಜಿಲ್ಲೆಯ ಕೊತ್ವಾಲಿ ಕ್ಷೇತ್ರದ ಗಂಗೋತ್ರಿನಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿದ್ದಾರೆ.
ದಾಳಿ ವೇಳೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯ ಮಕ್ಕಳೇ ಗ್ರಾಹಕರನ್ನು ಕರೆತರುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಸರಗಾನ ಎಂಬ ಮಹಿಳೆ ವೇಶ್ಯಾವಾಟಿಕೆ ನಡೆಸುತ್ತಿದ್ದು, ಇಬ್ಬರು ಮಕ್ಕಳು ಗ್ರಾಹಕರನ್ನು ಕರೆತರುತ್ತಿದ್ದರು. ಬಳಿಕ ಯುವತಿಯರನ್ನು ಕರೆಸಿಕೊಂಡು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು.
ಗ್ರಾಹಕರಿಗೆ ಮೊಬೈಲ್ ಮೂಲಕ ಫೋಟೋಗಳನ್ನು ಕಳುಹಿಸಿ ದರ ನಿಗದಿ ಮಾಡಲಾಗುತ್ತಿತ್ತು. ಗಂಗೋತ್ರಿ ನಗರದ ಮನೆಯಲ್ಲಿ ದಂಧೆ ನಡೆಯುತ್ತಿರುವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದರು. ಹೊರಗಿನಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಕಲೆಹಾಕಿದ ಮಹಿಳಾ ಠಾಣೆ ಪೊಲೀಸರ ತಂಡ ದಾಳಿ ಮಾಡಿ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಎಸ್.ಎನ್. ತಿವಾರಿ ಮಾಹಿತಿ ನೀಡಿದ್ದಾರೆ.