ನವದೆಹಲಿ: ಕರ್ನಾಟಕದ ಮಂಡ್ಯ ಜಿಲ್ಲೆಯ ಕಾಮೇಗೌಡರು ಸಣ್ಣ ಕೆರೆಗಳನ್ನು ನಿರ್ಮಿಸುವ ಮೂಲಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ಕರ್ನಾಟಕದ 80 ವರ್ಷದ ಕಾಮೇಗೌಡರು ಅನೇಕ ಕೆರೆ ನಿರ್ಮಾಣ ಮಾಡಿದ್ದಾರೆ. ಅವರ ಶ್ರಮ ಶ್ಲಾಘನೀಯ. ಅವರ ಸಾಧನೆಯನ್ನು ಕೇಳಿದರೆ ಎಲ್ಲರು ಆಶ್ಚರ್ಯಪಡುತ್ತಾರೆ. 17 ಸಣ್ಣ ಕೆರೆಗಳನ್ನು ಅವರು ನಿರ್ಮಿಸಿ ತಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ ಎಂದು ಹೇಳಿದ್ದಾರೆ.
ಅನ್ಲಾಕ್ ಸಂದರ್ಭದಲ್ಲಿ ಜನ ಅಲರ್ಟ್ ಆಗಿ ಇರಬೇಕು. ಅಲರ್ಟ್ ಆಗಿ ಇರುವುದು ಬಹಳ ಮುಖ್ಯವಾಗಿದೆ. ಕೊರೋನಾ ಮಹಾಮಾರಿ ವಿರುದ್ಧ ಮಹಾಯುದ್ಧವೇ ನಡೆಯುತ್ತಿದೆ ಎಂದು ಹೇಳಿದ ಮೋದಿ, ಮುಂಗಾರು ಆಗಮನದ ನಂತರದಲ್ಲಿ ರೈತರು ತಮ್ಮ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಸ್ಥಳಿಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆರ್ಥಿಕತೆ ಚೇತರಿಕೆಗೆ ಒತ್ತು ನೀಡಲಾಗಿದೆ. ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಜನರು ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.