alex Certify 13 ವರ್ಷದ ವಿದ್ಯಾರ್ಥಿ ಜೊತೆ ಮದುವೆ ಮಾಡಿಕೊಂಡ ಶಿಕ್ಷಕಿ…..! ನಡೀತು ಪ್ರಸ್ತ, ವಿಧವೆಯಾಗುವ ನಾಟಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

13 ವರ್ಷದ ವಿದ್ಯಾರ್ಥಿ ಜೊತೆ ಮದುವೆ ಮಾಡಿಕೊಂಡ ಶಿಕ್ಷಕಿ…..! ನಡೀತು ಪ್ರಸ್ತ, ವಿಧವೆಯಾಗುವ ನಾಟಕ

ಶಾಲಾ ಶಿಕ್ಷಕಿಯೊಬ್ಬಳು 13 ವರ್ಷದ ವಿದ್ಯಾರ್ಥಿ ಜೊತೆ ಮದುವೆಯಾದ ಘಟನೆ ಜಲಂದರ್ ನಲ್ಲಿ ಬೆಳಕಿಗೆ ಬಂದಿದೆ. ಟ್ಯೂಷನ್ ಆಸೆ ತೋರಿಸಿ ಶಿಕ್ಷಕಿ, ವಿದ್ಯಾರ್ಥಿಯನ್ನು ಮದುವೆಯಾಗಿದ್ದಾಳೆ. ಶಿಕ್ಷಕಿಗೆ ಅನೇಕ ವರ್ಷಗಳಿಂದ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಪಂಡಿತರ ಮಾತಿನ ಮೇರೆಗೆ ಈಕೆ ವಿದ್ಯಾರ್ಥಿಯನ್ನು ಸಾಂಕೇತಿಕವಾಗಿ ಮದುವೆಯಾಗಿದ್ದಾಳೆ.

ಟ್ಯೂಷನ್ ಹೇಳಿಕೊಡುವುದಾಗಿ ವಿದ್ಯಾರ್ಥಿಯನ್ನು ಆರು ದಿನ ಮನೆಯಲ್ಲಿಟ್ಟುಕೊಂಡಿದ್ದಾಳೆ. ಅರಿಶಿನ ಶಾಸ್ತ್ರದಿಂದ ಹಿಡಿದು ಪ್ರಸ್ತದ ವರೆಗೆ ಎಲ್ಲವೂ ಸಾಂಕೇತಿಕವಾಗಿ ನಡೆದಿದೆ. ನಂತ್ರ ವಿಧವೆ ನಾಟಕವೂ ಆಗಿದೆ. ಶೋಕ ಸಭೆಯನ್ನು ಕೂಡ ಮಾಡಲಾಗಿದೆ. ಹೀಗೆ ಮಾಡಿದ್ರೆ ಶಿಕ್ಷಕಿಗೆ ಬೇಗ ಮದುವೆಯಾಗುತ್ತದೆ ಎಂದು ಪಂಡಿತರು ಹೇಳಿದ್ದ ಕಾರಣ ಶಿಕ್ಷಕಿ ಹಾಗೂ ಆಕೆ ಕುಟುಂಬಸ್ಥರು ಹೀಗೆ ಮಾಡಿದ್ದಾರೆ.

ಆರು ದಿನಗಳ ನಂತ್ರ ಮನೆಗೆ ಬಂದ ವಿದ್ಯಾರ್ಥಿ, ಪಾಲಕರಿಗೆ ವಿಷ್ಯ ತಿಳಿಸಿದ್ದಾನೆ. ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಠಾಣೆಗೆ ಬಂದ ಶಿಕ್ಷಕಿ, ಸಂಧಾನ ಮಾಡಿಕೊಂಡಿದ್ದಳು ಎನ್ನಲಾಗಿದೆ. ಆದ್ರೆ ಹಿರಿಯ ಪೊಲೀಸ್ ಅಧಿಕಾರಿಗೆ ಈ ವಿಷ್ಯ ಗೊತ್ತಾಗಿದ್ದು, ತನಿಖೆಗೆ ಆದೇಶ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...