ಮಧ್ಯಪ್ರದೇಶದ ಪನ್ನಾದ ಹಳ್ಳಿಯೊಂದರಲ್ಲಿ ಕಾರ್ಮಿಕ ಹಾಗೂ ಮತ್ತಾತನ ಸಹಚರರು 7.94 ಕ್ಯಾರೆಟ್ ಹಾಗೂ 1.93 ಕ್ಯಾರಟ್ ವಜ್ರವನ್ನ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಜ್ರವನ್ನ ಪತ್ತೆ ಹಚ್ಚಿದ ಕಾರ್ಮಿಕನನ್ನ ಭಗವಾನ್ ದಾಸ್ ಕುಶ್ವಾಹ ಎಂದು ಗುರುತಿಸಲಾಗಿದೆ. ಕಿತಾಹ ಗ್ರಾಮದ ಬಳಿಯ ಗಣಿಯಿಂದ ತೆಗೆದ 2 ವಜ್ರದ ತುಂಡನ್ನ ಮಾರ್ಚ್ ತಿಂಗಳಲ್ಲಿ ಹರಾಜು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
BIG NEWS: ಮೈನಿಂಗ್ ಮಾಡುವವರಿಗೆ ಇನ್ಮುಂದೆ ತರಬೇತಿ ಕಡ್ಡಾಯ
ನಾವು ಐದು ಮಂದಿ ಗಣಿಯನ್ನ ಅಗಿಯುತ್ತಿದ್ದ ವೇಳೆ ನಾವು ಈ ವಜ್ರವನ್ನ ಕಂಡೆವು. ಈ ವಜ್ರದಿಂದಾಗಿ ನಮ್ಮ ಬಡತನ ಹಾಗೂ ನಮ್ಮ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತೆ ಎಂದು ಕುಶ್ವಾಹ ಸಂತಸ ವ್ಯಕ್ತಪಡಿಸಿದ್ದಾರೆ. ಈ ವಜ್ರದಿಂದ ಕುಶ್ವಾಹ ಹಾಗೂ ಉಳಿದ ನಾಲ್ವರು ಒಟ್ಟು 34 ಲಕ್ಷ ರೂಪಾಯಿವರೆಗೆ ಪಡೆಯಬಹುದು ಎಂದು ತಜ್ಞರು ಮಾಹಿತಿ ನೀಡಿದ್ದಾರೆ.