ದೇಶಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ, ಈ ನಡುವೆಯೂ ಜನ ತಮ್ಮ ಸಂಭ್ರಮವನ್ನು ಕಳೆದುಕೊಳ್ಳಲು ಇಷ್ಟಪಡುತ್ತಿಲ್ಲ.
ಸಾಂಕ್ರಾಮಿಕ ರೋಗ ವ್ಯಾಪಕವಾಗಿದ್ದಾಗಲೂ ಸಹ ಜನರು ಮತ್ತು ಸರ್ಕಾರ ತೋರಿಸಿರುವ ನಿರ್ಲಕ್ಷ್ಯದಿಂದಾಗಿ ಹರಿದ್ವಾರದ ಮಹಾಕುಂಭ ಈಗಾಗಲೇ ಸಾಕಷ್ಟು ಚರ್ಚೆಯಲ್ಲಿದೆ. ಇದೀಗ ಆಂಧ್ರಪ್ರದೇಶದ ಕರ್ನೂಲ್ ನ ಒಂದು ಆಚರಣೆಯ ವಿಡಿಯೊ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹುಟ್ಟುಹಾಕಿದೆ.
ಕರ್ನೂಲ್ ಜಿಲ್ಲೆಯ ಕೈರುಪ್ಪಳ ಗ್ರಾಮದಲ್ಲಿ, ಉಗಾದಿಯ ನಂತರ ‘ಪಿಡಕಲ್ ಯುದ್ಧ’ ನಡೆಯಿತು. ಅಲ್ಲಿ ಸಾವಿರಾರು ಜನರು ಒಂದೆಡೆ ಜಮಾಯಿಸಿ ಹಸುವಿನ ಸಗಣಿ ಪರಸ್ಪರ ಎರಚಿ, ಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ.
ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರರಿಗೆ ಭರ್ಜರಿ ʼಬಂಪರ್ʼ ಸುದ್ದಿ
ಈ ವೇಳೆ ಅಲ್ಲಿ ಯಾರೂ ಸಾಮಾಜಿಕ ಅಂತರ ಕಾಪಾಡಿಕೊಂಡಿರಲಿಲ್ಲ. ಮಾಸ್ಕ್ ಸಹ ಧರಿಸಿರಲಿಲ್ಲ. ಈ ಕಾರಣಕ್ಕಾಗಿಯೇ, ವೀಡಿಯೊ ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ಮಾತ್ರವಲ್ಲದೆ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ವ್ಯಾಪಕವಾಗಿ ವೈರಲ್ ಆಗಿದ್ದು ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ 1,21,300 ವೀಕ್ಷಣೆಗಳನ್ನು ಗಳಿಸಿದೆ.