ದೇಶದಲ್ಲಿ ಡೆಡ್ಲಿ ವೈರಸ್ನ ಹಾವಳಿ ಮಿತಿಮೀರಿದೆ. ಈ ನಡುವೆ ಕುಂಭಮೇಳದಿಂದ ವಾಪಸ್ಸಾದ ಭಕ್ತರು ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆಯನ್ನ ಇನ್ನಷ್ಟು ಹೆಚ್ಚು ಮಾಡೋ ಸಾಧ್ಯತೆ ಇದೆ ಅಂತಾ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ತಬ್ಲಿಘಿ ಜಮಾತ್ ಕಾರ್ಯಕ್ರಮದಿಂದಾಗಿ ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ವ್ಯಾಪಕವಾಗಿ ಏರಿಕೆ ಕಂಡಿತ್ತು. ಈ ವರ್ಷ ಕುಂಭಮೇಳದಿಂದ ವಾಪಸ್ಸಾದ ಜನರು ದೇಶದ ಜನತೆಗೆ ಪ್ರಸಾದದ ರೂಪದಲ್ಲಿ ಸೋಂಕನ್ನ ನೀಡಲಿದ್ದಾರೆ ಎಂದು ಕಿಶೋರಿ ಹೇಳಿದ್ದಾರೆ.
ಕುಂಭಮೇಳಕ್ಕೆ ಯಾರ್ಯಾರು ಹೋಗಿದ್ದಾರೆ ಹಾಗೂ ಯಾರು ವಾಪಸ್ಸಾಗ್ತಿದ್ದಾರೆ ಅನ್ನೋದ್ರ ಬಗ್ಗೆ ನನಗೆ ಮಾಹಿತಿ ಇಲ್ಲ. ಕಳೆದ ವರ್ಷ ದೆಹಲಿಯಲ್ಲಿ ಮುಸ್ಲಿಂ ಬಾಂಧವರು ತಬ್ಲಿಘಿ ಜಮಾತ್ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಕೊರೊನಾ ಸೋಂಕನ್ನ ಹರಡಿದ್ದರು. ಇದೀಗ ಕುಂಭಮೇಳದಿಂದಲೂ ಇದೇ ರೀತಿ ಆಗಲಿದೆ ಎಂದು ಕಿಶೋರಿ ಹೇಳಿದ್ರು.
ಕುಂಭಮೇಳದಿಂದ ವಾಪಸ್ಸಾಗುವ ಪ್ರತಿಯೊಬ್ಬರು ತಮ್ಮದೇ ಖರ್ಚಿನಲ್ಲಿ ಕ್ವಾರಂಟೈನ್ ಆಗಬೇಕು ಹಾಗೂ ಕೊರೊನಾ ಪರೀಕ್ಷೆಗೆ ಒಳಗಾಗಬೇಕು ಎಂದು ಕಿಶೋರಿ ಸೂಚನೆ ನೀಡಿದ್ದಾರೆ.