alex Certify ಕೇಂದ್ರ ಸಚಿವರ ಮಾತಿನ ಬಳಿಕ ʼಕೂʼ ಅಪ್ಲಿಕೇಶನ್ ಕುರಿತು ಹೆಚ್ಚಾಯ್ತು ಕುತೂಹಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸಚಿವರ ಮಾತಿನ ಬಳಿಕ ʼಕೂʼ ಅಪ್ಲಿಕೇಶನ್ ಕುರಿತು ಹೆಚ್ಚಾಯ್ತು ಕುತೂಹಲ

ನಾನೀಗ ಕೂ ಅಪ್ಲಿಕೇಶನ್​ನಲ್ಲಿ ಸಕ್ರಿಯನಾಗಿದ್ದೇನೆ. ಭಾರತೀಯ ಮೈಕ್ರೋ ಬ್ಲಾಗಿಂಗ್​ ಫ್ಲಾರ್ಟ್​ಫಾರಂ ಅದ್ಭುತವಾಗಿದ್ದು ಅಪರೂಪದ ಅಪ್​ಡೇಟ್​ಗಳನ್ನೂ ಹೊಂದಿದೆ ಎಂದು ಹೇಳುವ ಮೂಲಕ ಮಂಗಳವಾರ ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಭಾರತೀಯರನ್ನ ಕೂ ಅಪ್ಲಿಕೇಶನ್​ ಬಳಕೆಗೆ ಆಹ್ವಾನಿಸಿದ್ದರು.

ಕೇಂದ್ರ ಸಚಿವರ ಈ ಆಹ್ವಾನದ ಬಳಿಕ ಭಾರತೀಯರಿಗೆ ಕೂ ಅಪ್ಲಿಕೇಶನ್​ ಬಗ್ಗೆ ಕುತೂಹಲ ಹೆಚ್ಚಾಗಿದೆ. ಹೀಗಾಗಿ ಕೂ ಬಗ್ಗೆ ಹುಡುಕಾಟ ಆರಂಭಿಸಿದ್ದಾರೆ.

ಕೂ ಅನ್ನೋದು ಒಂದು ಮೈಕ್ರೋಬ್ಲಾಗಿಂಗ್​ ಸೋಶಿಯಲ್​ ಮೀಡಿಯಾ ಅಪ್ಲಿಕೇಶನ್​ ಆಗಿದ್ದು ಇದನ್ನ ಕಳೆದ ವರ್ಷ ಮಾರ್ಚ್​ನಲ್ಲೇ ಅಭಿವೃದ್ಧಿಪಡಿಸಲಾಗಿದೆ. ಇದನ್ನ ಟ್ವಿಟರ್​​ನ ದೇಸಿ ಮಾದರಿ ಅಂತಾ ಹೇಳಿದ್ರೆ ತಪ್ಪಾಗಲಿಕ್ಕಿಲ್ಲ. ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತಕ್ಕೆ ಕರೆ ನೀಡಿದ ಬಳಿಕ ಈ ಅಪ್ಲಿಕೇಶನ್​ ಹೆಚ್ಚಾಗಿ ಬೆಳಕಿಗೆ ಬಂದಿದೆ.

ಆದರೆ ಈ ಕೂ ಅಪ್ಲಿಕೇಶನ್​ ಟ್ವಿಟರ್​ನಲ್ಲಿ ತಮಿಳಿಗರನ್ನ ಒಂದು ಮಾಡಿದೆ. ಕೂ ಎಂಬ ಹೆಸರನ್ನೇ ವಸ್ತು ವಿಷಯವಾಗಿಸಿಕೊಂಡಿರುವ ತಮಿಳಿಗರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇತ್ತ ತಮಿಳಿಗರಲ್ಲದವರೂ ಕೂಡ ಕೂ ಎಂದರೆ ಅರ್ಥವೇನು ಎಂದು ಹುಡುಕಾಟ ನಡೆಸಿದ್ದಾರೆ.

ಕೂ ಹುಡುಕಾಟ ಇಲ್ಲಿಗೆ ಕೊನೆಯಾಗಿಲ್ಲ. ಅನೇಕರು ಗೂಗಲ್​​ನಲ್ಲೂ ಕೂ ಅರ್ಥದ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಕೂ ಎಂಬ ಅಪ್ಲಿಕೇಶನ್​ನ್ನು 2020ರಲ್ಲಿ ಅಪ್ರಮೇಯ ರಾಧಾಕೃಷ್ಣ ಹಾಗೂ ಮಯಂಕ್​ ಬ್ರಿದ್ವಾಕತಾ ಎಂಬವರು ಕಂಡು ಹಿಡಿದಿದ್ದಾರೆ. ಈ ಅಪ್ಲಿಕೇಶನ್​ ಒಡೆತನವನ್ನ ಬಾಂಬಿನೇಟ್​ ಟೆಕ್ನಾಲಜೀಸ್​ ಪ್ರೈವೇಟ್​ ಲಿಮಿಟೆಡ್​ ಎಂಬ ಕಂಪನಿ ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...